ನವದೆಹಲಿ: ದೆಹಲಿ ಮೆಟ್ರೋ ರಕ್ಷಾ ಬಂಧಬನದ ಮುನ್ನಾ ದಿನ 33 ಲಕ್ಷ ಪ್ರಯಾಣಿಕರು ಪ್ರಯಾಣಿಸಿ ದಾಖಲೆ ನಿರ್ಮಿಸಿದ್ದಾರೆ. ಆಗಸ್ಟ್ ತಿಂಗಳಿನಲ್ಲೇ 10ರಲ್ಲಿ 9 ದೈನಂದಿನ ಮೆಟ್ರೋಗಳಿಂದ ಇದು ದಾಖಲಾಗಿದೆ.
ಸುಮಾರು 33,61,911 ಪ್ರಯಾಣಿಕರು ಆಗಸ್ಟ್ 17ರಂದು ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಏರ್ಪೋರ್ಟ್ ಎಕ್ಸ್ಪ್ರೆಸ್ ಲೈನ್ ಕಳೆದ ಶುಕ್ರವಾರ ಕೇವಲ 50,000 ಪ್ರಯಾಣಿಕರು ಪ್ರಯಾಣಿಸಿದ್ದರು.
ದೆಹಲಿ ಮೆಟ್ರೋ ರೈಲು ಸಂಸ್ಥೆ (DMRC) ದ್ವಾರಕಾ ಸೆಕ್ಟರ್-21ರಿಂದ ನೋಯ್ಡಾ ಸಿಟಿ ಸೆಂಟರ್/ವೈಶಾಲಿಗೆ ಸಂಪರ್ಕಿಸುವ ಬ್ಲೂಲೈನ್ ಮಾರ್ಗದಲ್ಲಿ 12,03,915 ಪ್ರಯಾಣಿಕರು ಪ್ರಯಾಣಿಸುವ ಮೂಲಕ ದಾಖಲೆ ಮಾಡಿದೆ ಎಂದು ಹೇಳಿದೆ.
ಅದೇ ರೀತಿ ದೆಹಲಿಯ ಸಮಯಪುರ್ ಬದಲಿ-ಗುರ್ಗಾಂವ್ ಸಿಟಿ ಯೆಲ್ಲೋ ಲೈನ್ ನಡುವೆ 11,68,410 ಪ್ರಯಾಣಿಕರು ಪ್ರಯಾಣಿಸಿದ್ದು ಎರಡನೇ ದಾಖಲೆ ಎಂದು ದೆಹಲಿ ಮೆಟ್ರೋ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.