ಮುಂಬಯಿ: ಇಸ್ಲಾಂ ಪ್ರವಚಕ ಝಾಕಿರ್ ನಾಯ್ಕ್ನ ಇಸ್ಲಾಮಿಕ್ ಇಂಟರ್ನ್ಯಾಶನಲ್ ಸ್ಕೂಲ್ ಬಗ್ಗೆ ಮುಂಬಯಿ ಪೊಲೀಸರು ನೀಡಿರುವ ವರದಿ ಭಾರೀ ಕುತೂಹಲವನ್ನು ಮೂಡಿಸಿದೆ.
ಮುಂಬಯಿಯ ಮಝಗಾಂನ್ ಏರಿಯಾದಲ್ಲಿ ಈ ಸ್ಕೂಲ್ ಇದ್ದು, ಹಲವಾರು ಸಮಯದಿಂದ ಸರ್ಕಾರ ಇದರ ಮೇಲೆ ನಿಗಾ ಇಟ್ಟಿದೆ. ಇದೀಗ ಪೊಲೀಸರು ಇದರ ಬಗ್ಗೆ ನೀಡಿರುವ ವರದಿ ಕೆಲವೊಂದು ಮಾಹಿತಿಗಳನ್ನು ಬಹಿರಂಗಪಡಿಸಿದೆ.
ಈಗಾಗಲೇ ಪೊಲೀಸರು ಒಟ್ಟು 71 ಪುಟಗಳ ವರದಿಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಕಳುಹಿಸಿಕೊಟ್ಟಿದೆ.
ಈ ಸ್ಕೂಲ್ನಲ್ಲಿರುವ ಸಿಲೆಬಸ್ಗಳೇ ಯುವ ಮನಸ್ಸುಗಳ ಮನಸ್ಸು ಕೆಡಿಸಲು, ಇತರ ಧರ್ಮ ನಂಬಿಕೆಯನ್ನು ಅವರು ದ್ವೇಷಿಸುವಂತೆ ಮಾಡಲು ಮತ್ತು ಇಸ್ಲಾಂಗೆ ಮತಾಂತರಗೊಳ್ಳುವಂತೆ ಮಡಲು ಸಾಕು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಚೆನ್ನೈನಲ್ಲೂ ಈ ಸ್ಕೂಲ್ನ ಬ್ರಾಂಚ್ ಇದ್ದು, ಅದರ ಜವಾಬ್ದಾರಿಯನ್ನು ನಾಯ್ಕ್ ಹೊತ್ತುಕೊಂಡಿದ್ದಾನೆ. ಮುಸ್ಲಿಮೇತರ ಶಾಲೆಗಳಿಂದ ದೂರವಿರುವಂತೆ ಇಲ್ಲಿ ಸೂಚಿಸಲಾಗುತ್ತದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.