ಇಸ್ಲಾಮಾಬಾದ್ : ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತ ಹಿಂದುಗಳು ಅತಿ ದುಸ್ತರವಾಗಿ ಜೀವನವನ್ನು ಸಾಗಿಸುತ್ತಿದ್ದಾರೆ. ಹಿಂದೂ ಯುವತಿಯರ ಅಪಹರಣ, ಬಲವಂತದ ಮತಾಂತರ ಸರ್ವೇ ಸಾಮಾನ್ಯ ಎಂಬಂತಾಗಿದೆ.
ಹಿಂದೂ ಕುಟುಂಬದ ಹೆಣ್ಣು ಮಕ್ಕಳನ್ನು ಅಪಹರಿಸಿ, ಮುಸ್ಲಿಂ ಯುವಕರೊಂದಿಗೆ ಮದುವೆ ಮಾಡಿಸಲಾಗುತ್ತಿದೆ. ಮತ್ತೆ ಅವರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತಿದೆ.
ಪಾಕಿಸ್ಥಾನದ ಹಿಂದೂ ಸಂಸ್ಥೆಗಳು ಹಿಂದೂ ಹೆಣ್ಣು ಮಕ್ಕಳ ವಿರುದ್ಧ ನಡೆಯುತ್ತಿರುವ ಈ ದೌರ್ಜನ್ಯವನ್ನು ಕಟುವಾಗಿ ಖಂಡಿಸಿವೆ. ಹೆಣ್ಣು ಮಕ್ಕಳ ಈ ಬಲವಂತದ ಮತಾಂತರದ ಹಿಂದೆ ಇರುವ ಮಿಯಾನ್ ಅಬ್ದುಲ್ ಹಕ್ ಅಥವಾ ಮಿತ್ತೂ ಮಿಯಾನ್ ಎಂಬ ರಾಜಕಾರಣಿ ಮತ್ತು ಮುಸ್ಲಿಂ ಧರ್ಮಗುರುವಿನ ವಿರುದ್ಧ ಇತ್ತೀಚೆಗೆ ಲಾಹೋರ್, ಕರಾಚಿ ಮತ್ತು ಇಸ್ಲಾಮಾಬಾದ್ನಲ್ಲಿ ನೂರಾರು ಹಿಂದುಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.
ಪಾಕಿಸ್ಥಾನ ಮಾತ್ರವಲ್ಲದೆ, ಟೊರೆಂಟೋ, ನ್ಯೂಯಾರ್ಕ್, ಹೋಸ್ಟನ್ಗಳಲ್ಲೂ ಹಕ್ ವಿರುದ್ಧ ಪ್ರತಿಭಟನೆಗಳು ನಡೆದಿವೆ.
ಈ ಹಕ್ ಹಿಂದೂಗಳ ಪಾಲಿಗೆ ಭಯೋತ್ಪಾದನೆಯ ಪ್ರತೀಕದಂತಾಗಿದ್ದಾನೆ.
‘ಹಕ್ ಬಲವಂತದ ಮತಾಂತರದ ಸಂಕೇತ. ಈತನ ವಿರುದ್ಧ ಮಾತನಾಡುವ ಧೈರ್ಯ ಆ ಪ್ರದೇಶದ ಯಾವುದೇ ಹಿಂದೂಗಳಿಗಿಲ್ಲ’ ಎಂದು ಹೋರಾಟಗಾರ ಕಪಿಲ್ದೇವ್ ಆರೋಪಿಸಿದ್ದಾರೆ.
ಇವರು ಆತನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಹಕ್ ಪಾಕಿಸ್ಥಾನದ ಸಿಂಧ್ ಪ್ರಾಂತ್ಯದ ಮುಸ್ಲಿಂ ಪ್ರಭಾವಿ ಕುಟುಂಬಕ್ಕೆ ಸೇರಿದವನಾಗಿದ್ದಾನೆ. ಈ ಭಾಗದಲ್ಲಿ ಅಪಾರ ಸಂಖ್ಯೆಯ ಹಿಂದೂಗಳಿದ್ದಾರೆ. ಇವರನ್ನು ನಿರಂತರವಾಗಿ ಈತ ಪೀಡಿಸುತ್ತಿದ್ದು, ಹಿಂದೂ ಹೆಣ್ಣು ಮಕ್ಕಳ ಅಪಹರಣ, ಮತಾಂತರ, ಬಲವಂತದ ಮದುವೆಯಂತಹ ದುಷ್ಕೃತ್ಯಗಳನ್ನು ಎಸಗುತ್ತಿದ್ದಾನೆ ಎಂಬ ಆರೋಪವಿದೆ.
ಆದರೂ ಅಲ್ಲಿನ ಆಡಳಿತ ಈತನ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಇದು ಅಲ್ಲಿನ ಹಿಂದೂಗಳನ್ನು ತೀವ್ರ ಆಂತಕಕ್ಕೆ ದೂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.