ನವದೆಹಲಿ: ಓರ್ವ ಫ್ರೀಲ್ಯಾನ್ಸರ್ಗೆ ಇರುವ ದೊಡ್ಡ ಅನುಕೂಲವೆಂದರೆ ಅವರ ಫ್ಲೆಕ್ಸಿಬಲ್ ಕೆಲಸ. ಇವರ ದೈನಂದಿನ ವೇತನ ಸರಾಸರಿ 46,000 ಇದ್ದು, ಇದು ತುಂಬ ಲಾಭದಾಯಕವಾಗಿದೆ ಎಂದು ವರದಿಯೊಂದು ಹೇಳಿದೆ.
ನಿಪುಣ ಸ್ವತಂತ್ರ ವೃತ್ತಿಪರರು (0-5 ವರ್ಷ ಅನುಭವ) ಫ್ರೀಲ್ಯಾನ್ಸ್ ಆಗಿ ದಿನವೊಂದಕ್ಕೆ (ಸರಾಸರಿ ವೇತನ) 8,000 ಗಳಿಸುತ್ತಾರೆ. ಅವರು 5-10 ವರ್ಷಗಳ ಅನುಭವ ಪಡೆಯುತ್ತಿದ್ದಂತೆ ಅವರ ಸಂಭಾವನೆ ದಿನಕ್ಕೆ (ಸರಾಸರಿ) 19,000 ತಲುಪುತ್ತದೆ ಎಂದು ‘Flexing It’ ವರದಿ ಮಾಡಿದೆ.
ಅವರು ಸುಮಾರು 20 ವರ್ಷ ಅನುಭವ ಪಡೆಯುತ್ತಲೇ ಅವರ ಸಂಭಾವನೆ 46,000 ವರೆಗೆ ಏರಬಹುದು ಎಂದು ಅದು ಹೇಳಿದೆ.
‘Flexing It ‘ ಸ್ವತಂತ್ರ ವೃತ್ತಿಪರರು, ಸಂಸ್ಥೆಗಳನ್ನು ಸಂಪರ್ಕಿಸುವ ಆನ್ಲೈನ್ ವೇದಿಕೆಯಾಗಿದೆ. ಭಾರತದ ಕಾರ್ಪೋರೇಟ್ ಸಂಸ್ಥೆಗಳು, ಸ್ಟಾರ್ಟ್ಅಪ್ಗಳು, ಎಂಎನ್ಸಿಗಳ 2,500 ಉದ್ಯೋಗಿಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.
ಉತ್ಪಾದನಾ ಕೈಗಾರಿಕೆಗಳು, ಹಣಕಾಸು ಮತ್ತು ಮಾರಾಟ ಕಂಪೆನಿಗಳು 5 ವರ್ಷ ಅನುಭವ ಹೊಂದಿದ ಫ್ರೀಲಾನ್ಸ್ಗಳಿಗೆ ಅತೀ ಹೆಚ್ಚು ವೇತನ ನೀಡುತ್ತಿವೆ. ೨೦ ಅಥವಾ ಹೆಚ್ಚು ಅನುಭವ ಪಡೆದವರು ಹಣಕಾಸು, ನಿರ್ವಹಣೆ, ತಂತ್ರಜ್ಞಾನ, ವ್ಯಾಪಾರ ಕ್ಷೇತ್ರದವರಾಗಿದ್ದಾರೆ.
ಐಟಿ ವಲಯ, ಇ-ವಾಣಿಜ್ಯ, ವೃತ್ತಿಪರ ಸೇವೆ, ವ್ಯಾಪಾರ ಕ್ಷೇತ್ರದಲ್ಲಿ ಫ್ರೀಲ್ಯಾನ್ಸರ್ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂದು ಅಧ್ಯಯನದ ಮೂಲಕ ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.