ನವದೆಹಲಿ: ದೆಹಲಿ-ಎನ್ಸಿಆರ್ಗಳಲ್ಲಿ ಡೀಸೆಲ್ ಎಸ್ಯುವಿ ಅಥವಾ 2000ಸಿಸಿ ಎಂಜಿನ್ ಸಾಮರ್ಥ್ಯದ ಕಾರುಗ ಮೇಲಿನ ನಿಷೇಧವನ್ನು ರದ್ದುಗೊಳಿಸಿದೆ.
ಡೀಸೆಲ್ ವಾಹನಗಳ ನೋಂದಣಿಗೆ ಅನುಮತಿ ನೀಡಲಾಗಿದ್ದು, ಆದರೆ ವಾಹನ ತಯಾರಕರು, ವಿತರಕರು ಈ ವಾಹನಗಳ ಶೋರೂಂ ದರಗಳ ಮೇಲೆ ಶೇ.1 ಪರಿಸರ ತೆರಿಗೆ ಪಾವತಿಸುವಂತೆ ನಿರ್ದೇಶಿಸಿದೆ.
ಈ ಹಿಂದೆ ಸುಪ್ರೀಂ ಕೋರ್ಟ್ ಡಿಸೆಂಬರ್ ತಿಂಗಳಿನಲ್ಲಿ ದೆಹಲಿ-ಎನ್ಸಿಆರ್ನಲ್ಲಿ ಡೀಸೆಲ್ ಎಸ್ಯುವಿ ಅಥವಾ 2000ಸಿಸಿ ಎಂಜಿನ್ ವಾಹನಗಳನ್ನು ನಿಷೇಧಿಸಿತ್ತು. ಹಾಗೆಯೇ ಇತರ ಘನ ಡೀಸೆಲ್ ಇಂಜಿನ್ ವಾಹನಗಳ ಮೇಲೆ ವಾರ್ಷಿಕ ಪರಿಸರ ತೆರಿಗೆ ವಿಧಿಸಿತ್ತು.
ಹಲವು ಎಸ್ಯುವಿ ಕಾರು ತಯಾರಕರ ವಿರೋಧ, ಆಕ್ಷೇಪಗಳ ಬಳಿಕ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಇನ್ನು 2000ಸಿಸಿ ಗಿಂತ ಕಡಿಮೆ ಇಂಜಿನ್ ಸಾಮರ್ಥ್ಯದ ವಾಹನಗಳ ಮೇಲೆ ಕೂಡ ಪರಿಸರ ತೆರಿಗೆ ವಿಧಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.