ನವದೆಹಲಿ: ಅಸ್ಸಾಂ ರಾಜ್ಯ ಭಾರತದ ಅತೀ ದೊಡ್ಡ ತೆರಿಗೆ ಸುಧಾರಣೆಯಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ ಮೊದಲ ರಾಜ್ಯವಾಗಿದೆ.
ಅಸ್ಸಾಂ ವಿಧಾನಸಭೆಯಲ್ಲಿ ಒಂದು ಐತಿಹಾಸಿಕ ಮಸೂದೆ ಅನುಮೋದನೆ ಮಾಡಲಾಗಿದ್ದು, ಅಸ್ಸಾಂ ಜಿಎಸ್ಟಿ ಸಂಬಂಧಿಸಿದ ಸಾಂವಿಧಾನಿಕ ತಿದ್ದುಪಡಿ ಬಿಲ್ ಜಾರಿಗೊಳಿಸಿದ ಮೊದಲ ರಾಜ್ಯವಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಟ್ವೀಟ್ ಮಾಡಿದ್ದಾರೆ.
ಕಳೆದ ತಿಂಗಳು ರಾಜ್ಯಸಭೆಯಲ್ಲಿ 203-0 ಮತಗಳಿಂದ ಜಿಎಸ್ಟಿ ಮಸೂದೆ ಅನುಮೋದನೆ ಪಡೆದ ಬಳಿಕ ಲೋಕಸಭೆಯಲ್ಲಿ ಕೂಡ ಜಿಎಸ್ಟಿ ಅನುಮೋದನೆ ಪಡೆಯಿತು. ಇದರ ನಾಲ್ಕು ದಿನದಲ್ಲೇ ಅಸ್ಸಾಂ ಜಿಎಸ್ಟಿಗೆ ಅನುಮೋದನೆ ನೀಡಿದೆ.
ಒಟ್ಟು ೧೫ ಅಥವಾ ಭಾರತದ ೨೯ರಲ್ಲಿ ಅರ್ಧದಷ್ಟು ರಾಜ್ಯಗಳು ಜಿಎಸ್ಟಿ ತಿದ್ದುಪಡಿ ಮಸೂದೆಗೆಅನುಮೋದನೆ ನೀಡಿದಲ್ಲಿ ಮಾತ್ರ ಈ ಮಸೂದೆ ಜಾರಿಗೆ ಬರಲಿದೆ.
ಕೇಂದ್ರ ಸರ್ಕಾರ ಎಪ್ರಿಲ್ ೧, ೨೦೧೭ರ ಒಳಗೆ ಜಾರಿಗೆ ತರುವ ಗುರಿ ಹೊಂದಿದೆ. ಜಿಎಸ್ಟಿ, ದೇಶದ ಏಕೈಕ ರಾಷ್ಟ್ರೀಯ ತೆರಿಗೆ ಜಾರಿಗೆ ಬಂದಲ್ಲಿ ಇತರ ರಾಜ್ಯ ಸರ್ಕಾರಗಳು ಹಾಗೂ ಮಧ್ಯವರ್ತಿಗಳು ಪಡೆಯುವ ಪರೋಕ್ಷ ತೆರಿಗೆಗಳಿಗೆ ಕತ್ತರಿ ಬೀಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.