ಅಹ್ಮದಾಬಾದ್ : ಗುಜರಾತ್ನ ಗಾಂಧೀನಗರ ಸಮೀಪದ ಗ್ರಾಮವೊಂದರಲ್ಲಿ ನಿಜಕ್ಕೂ ಆಶ್ಚರ್ಯಚಕಿತಗೊಳ್ಳುವಂತಹ ಸನ್ನಿವೇಶವಿದೆ. ಇಲ್ಲಿ ಮುಸ್ಲಿಂ ಮಹಿಳೆಯೊಬ್ಬಳು ಸ್ವತಃ ದೇವಿಯಾಗಿ ಪೂಜಿಸಲ್ಪಡುತ್ತಿದ್ದಾಳೆ.
ಜುಲಾಸನ್ ಎಂಬ ಗ್ರಾಮದಲ್ಲಿ ಡೋಲಾ ಮಾತಾ ದೇವಿ ಎಂಬ ದೇಗುಲವಿದೆ. ವಿಶೇಷವೆಂದರೆ ಮುಸ್ಲಿಂ ಮಹಿಳೆಯೊಬ್ಬಳನ್ನು ಡೋಲಾ ದೇವಿಯಾಗಿ ಇಲ್ಲಿ ಆರಾಧಿಸಲಾಗುತ್ತದೆ.
ಕೆಲ ವರ್ಷಗಳ ಹಿಂದೆ ಖ್ಯಾತ ಗಗನಯಾತ್ರಿ ಸುನಿತಾ ವಿಲಿಯಮ್ಸ್ ತನ್ನ ತಂದೆಯೊಂದಿಗೆ ಇಲ್ಲಿ ಆಗಮಿಸಿ ಡೋಲಾ ಮಾತಾ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದರು. ಆ ವೇಳೆ ಈ ಗ್ರಾಮ ಭಾರೀ ಪ್ರಸಿದ್ಧಿಗೆ ಬಂದಿತ್ತು. ಸುನೀತಾ ತಂದೆ ದೀಪಕ್ ಪಾಂಡ್ಯಾ ಜುಲಾಸನ್ ಗ್ರಾಮದವರಾಗಿದ್ದು, 22 ವರ್ಷಗಳ ಕಾಲ ಇಲ್ಲಿ ನೆಲೆಸಿದ್ದರು. ಹಾಗಾಗಿ ಅವರು ಡೋಲಾ ದೇವಿಯ ಆರಾಧಕರಾಗಿದ್ದರು.
ಡೋಲಾ ಮಾತಾ ದೇವಿ ದೇಗುಲ 800 ವರ್ಷ ಹಳೆಯದಾಗಿದೆ. ಡೋಲಾ ದೇವಿ ಮೂಲತಃ ಮುಸ್ಲಿಂ ಮಹಿಳೆಯಾಗಿದ್ದು, ಜುಲಾಸನ್ ಗ್ರಾಮಕ್ಕೆ ಡಕಾಯಿತರು ಆಗಮಿಸಿ ಗ್ರಾಮಸ್ಥರನ್ನು ಲೂಟಿ ಮಾಡುತ್ತಿದ್ದ ಸಂದರ್ಭದಲ್ಲಿ ಪಕ್ಕದ ಗ್ರಾಮದ ಮುಸ್ಲಿಂ ಮಹಿಳೆ ಡಕಾಯಿತರ ವಿರುದ್ಧ ಹೋರಾಡಿ ಗ್ರಾಮಸ್ಥರನ್ನು ಕಾಪಾಡಿದ್ದಳು. ಬಳಿಕ ಡಕಾಯಿತರ ಕೈಯಿಂದಲೇ ಹತ್ಯೆಯಾಗಿ ಹೋಗಿದ್ದಳು. ಅವಳ ಈ ತ್ಯಾಗ ಸಾಹಸದ ಸ್ಮರಣಾರ್ಥ ಗ್ರಾಮಸ್ಥರು ಡೋಲಾ ಮಾತಾ ದೇವಿ ದೇಗುಲವನ್ನು ನಿರ್ಮಿಸಿದರು ಎಂದು ಪ್ರತೀತಿ ಇದೆ. ಈ ದೇಗುಲ ಬಗೆಗಿನ ಸಂಪೂರ್ಣ ವಿವರವನ್ನು ಬಿಜೆಪಿ ನಾಯಕ ಮುಖೇಶ್ ಪಟೇಲ್ ಸುನಿತಾ ವಿಲಿಯಮ್ಸ್ ಆಗಮಿಸಿದ್ದ ವೇಳೆ ಬಿಬಿಸಿಗೆ ನೀಡಿದ್ದರು.
ಈ ದೇಗುಲಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದರೆ ದೇವಿ ನಮ್ಮನ್ನು ರಕ್ಷಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿ ಬಲವಾಗಿದೆ.
ಆಶ್ಚರ್ಯವೆಂದರೆ ಜುಲಾಸನ್ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.