ಮುಂಬಯಿ: ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿದ ಬಳಿಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಇತರ ಕ್ರೀಡೆ ಮತ್ತು ಕ್ರೀಡಾಪಟುಗಳಿಗೂ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ.
ರಿಯೋ ಒಲಿಂಪಿಕ್ಸ್ 2016ನಲ್ಲಿ ಭಾರತೀಯ ಕ್ರೀಡಾಪಟುಗಳಿಗೆ ಬೆಂಬಲ ಸೂಚಿಸಲು ರಿಯೋ ಡಿ ಜನೈರೋಗೆ ಭೇಟಿ ನೀಡಿದ್ದ ತೆಂಡುಲ್ಕರ್ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರಲು ಕ್ರೀಡಾಪಟುಗಳು ತೋರುತ್ತಿರುವ ಶ್ರಮ ನನಗೆ ಅರ್ಥವಾಗುತ್ತದೆ. ರಿಯೋದಲ್ಲಿ ಭಾರತೀಯ ಕ್ರೀಡಾಪಟುಗಳ ಜೊತೆ ಕಾಲ ಕಳೆದಿರುವುದು ಅದ್ಭುತ ಮತ್ತು ಅವಿಸ್ಮರಣೀಯ ಎಂದು ಹೇಳಿದ್ದಾರೆ.
ರಿಯೋ ಒಲಿಂಪಿಕ್ಸ್ನಲ್ಲಿ ಕೆಲವು ಭಾರತೀಯ ಕ್ರೀಡಾಪಟುಗಳು ಪದಕ ಗೆಲ್ಲಲು ವಿಫಲಗೊಂಡಿದ್ದು, ಒಲಿಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳ ಭಾಗವಹಿಸುವಿಕೆಯಿಂದ ಅವಕಾಶ ಮತ್ತು ಹಣದ ನಷ್ಟ ಎಂದು ಇತ್ತೀಚೆಗೆ ಶೋಭಾ ಡೇ ಹೇಳಿದ್ದರು. ಅವರ ಈ ಹೇಳಿಕೆಗೆ ವಿವಿಧೆಡೆಗಳಿಂದ ವಿರೋಧವೂ ವ್ಯಕ್ತವಾಗಿತ್ತು.
ನಾವು ಅಲ್ಲಿ ಹೋಗಿ ನೋಡಿದಾಗಲೇ ನಮಗೆ ಕ್ರೀಡಾಪಟುಗಳು ಪಡುತ್ತಿರುವ ಶ್ರಮ, ಕಷ್ಟ ಅರ್ಥವಾಗುವುದು. ಅವರು ವರ್ಷಗಳ ಕಾಲ ಇದಕ್ಕಾಗಿ ಶ್ರಮಿಸಿ ನಂತರ ಕೂದಲೆಳೆ ಅಂತರದಲ್ಲಿ ಸೋಲನುಭವಿಸಿದಾಗ ನಿಜಕ್ಕೂ ಬೇಸರವಾಗುವುದು.
ಒಲಿಂಪಿಕ್ಸ್ನ ಮೊದಲ ಅರ್ಧದಲ್ಲಿ ನಮ್ಮ ಕಲ್ಪನೆಯಂತೆ ನಡೆದಿಲ್ಲವಾದರೂ ಕ್ರೀಡಾಪಟುಗಳು ಕುಂದಿದಾಗ ಅವರಿಗೆ ಬೆಂಬಲಿಸಿ. ಒಲಿಂಪಿಕ್ಸ್ ಜಗತ್ತಿನಲ್ಲೇ ಅತೀ ಸ್ಪರ್ಧಾತ್ಮಕ ಕ್ರೀಡಾಸ್ಪರ್ಧೆಯಾಗಿದೆ. ಒಂದು ದೇಶವನ್ನು ಪ್ರತಿನಿಧಿಸುವುದು ಸಾಮಾನ್ಯ ಕೆಲಸವಲ್ಲ. ಕ್ರೀಡಾಪಟುಗಳು ಪದಕ ಗೆಲ್ಲಲು ಪೂರ್ಣ ಪ್ರಯತ್ನ ಪಡುತ್ತಾರೆ ಎಂದು ತೆಂಡುಲ್ಕರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.