ನವದೆಹಲಿ : ನಮಾಝ್ ಮಾಡುವ ವೇಳೆ ವಿಗ್ ಧರಿಸುವುದು ಮತ್ತು ಇತರರ ಗಡ್ಡವನ್ನು ಬೋಳಿಸುವುದು ಹಾಗೂ ಟ್ರಿಮ್ ಮಾಡುವುದು ಇಸ್ಲಾಂಗೆ ವಿರುದ್ಧವಾದುದು, ಇದನ್ನು ಯಾರೂ ಮಾಡಕೂಡದು ಎಂದು ಮುಸ್ಲಿಂ ಸೆಮಿನಾರಿ ದಾರುಲ್ ಊಲುಮ್ ದಿಯೋಬಂದ್ ಫತ್ವಾ ಹೊರಡಿಸಿದೆ.
ವಿಗ್ ಅಥವಾ ಕೃತಕ ಗಡ್ಡ ಧರಿಸಿದರೆ ಅಲ್ಲಾಹುವಿಗೆ ಸಮರ್ಪಿಸುವ ನಮಾಝ್ ಅಪೂರ್ಣವಾಗುತ್ತದೆ. ನೀರು ಬುಡವನ್ನು ತಲುಪುವುದನ್ನು ವಿಗ್ ತಡೆಯುತ್ತದೆ. ಇದರಿಂದ ನವಾಝ್ನ ನಿಜವಾದ ಉದ್ದೇಶ ನಿರರ್ಥಕವಾಗುತ್ತದೆ. ದೇಹ ಅಪವಿತ್ರಗೊಳ್ಳುತ್ತದೆ ಎಂದು ದಾರುಲ್ ಮುಖಂಡ ಅಶ್ರಫ್ ಉಮಾಣಿ ಹೇಳಿದ್ದಾರೆ.
ವಿಗ್ ಧರಿಸುವುದು ಅತೀ ಮುಖ್ಯ ಎಂದಾದರೆ ನಮಾಝ್ ವೇಳೆ ಎತ್ತಿಟ್ಟು ಉಳಿದ ವೇಳೆ ಅದನ್ನು ಧರಿಸಿ ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ.
ಅಲ್ಲದೇ ಇಸ್ಲಾಂ ಧರ್ಮದಲ್ಲಿ ಇತರ ಧರ್ಮದ ವ್ಯಕ್ತಿಯ ಗಡ್ಡ ಬೋಳಿಸುವುದಕ್ಕೆ ಅನುಮತಿಯಿಲ್ಲ. ಈ ಉದ್ಯೋಗದಲ್ಲಿ ಯಾರಾದರೂ ಇದ್ದರೆ ತಕ್ಷಣ ಅವರು ಉದ್ಯೋಗ ಬದಲಾಯಿಸಿಕೊಳ್ಳಬೇಕು ಎಂದಿದ್ದಾರೆ.
ಈ ಫತ್ವಾದ ಬಳಿಕ ಹಲವು ಮುಸ್ಲಿಮರು ತಮ್ಮ ಶೌರದ ಅಂಗಡಿಯನ್ನು ಮುಚ್ಚಿದ್ದಾರೆ. ಇವರ ಅಂಗಡಿಯ ಮುಂದೆ ಫತ್ವಾದ ಪ್ರತಿ ಅಂಟಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.