ನವದೆಹಲಿ : ಎಎಪಿ ಪಕ್ಷದ ಶಾಸಕ ಕರ್ತಾರ್ ಸಿಂಗ್ ಅವರು ತಮ್ಮ ಬಳಿಯಿರುವ 130 ಕೋಟಿ ರೂ. ಮೌಲ್ಯದ ಆಸ್ತಿಯ ಲೆಕ್ಕ ನೀಡದೆ ಬಚ್ಚಿಟ್ಟಿದ್ದಾರೆ ಎಂದು ತೆರಿಗೆ ಅಧಿಕಾರಿಗಳು ಆರೋಪಿಸಿದ್ದಾರೆ.
54 ವರ್ಷದ ದಕ್ಷಿಣ ದೆಹಲಿಯ ಮೆಹರೌಲಿ ಕ್ಷೇತ್ರದ ಶಾಸಕರಾಗಿರುವ ಕರ್ತಾರ್ ಮೂಲತಃ ಓರ್ವ ಪ್ರಾಪರ್ಟಿ ಡೀಲರ್. ಕಳೆದ ತಿಂಗಳು ಇವರ ಮನೆ ಮತ್ತು ಕಛೇರಿಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅವರ ಬಳಿ ಅಪಾರ ಪ್ರಮಾಣದ ಬೇನಾಮಿ ಆಸ್ತಿ, ಫಾರ್ಮ್ಹೌಸ್ಗಳು ಇರುವ ಬಗೆಗಿನ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ.
ಇವರ ಬಳಿ ಹಲವಾರು ಫೇಕ್ ಕಂಪನಿಗಳಿದ್ದು, ಅದೆಲ್ಲ ಅವರ ಸಹಚರರ ಹೆಸರಿನಲ್ಲಿದೆ ಎನ್ನಲಾಗಿದೆ. ಸದ್ಯ ಅವರು ವಾಸಿಸುತ್ತಿರುವ ಫಾರ್ಮ್ಹೌಸ್ 26 ಎಕರೆ ವ್ಯಾಪ್ತಿಯಲ್ಲಿದ್ದು ಅದನ್ನು ಎಷ್ಟು ಮೌಲ್ಯಕ್ಕೆ ಖರೀದಿಗೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಕರ್ತಾರ್ ಬಳಿ ಉತ್ತರವಿಲ್ಲ.
ಈ ಆರೋಪ ಕೇಳಿ ಬಂದ ಬೆನ್ನಲ್ಲೇ ಇದೀಗ ಎಎಪಿ ಅವರ ಬೆಂಬಲಕ್ಕೆ ಆಗಮಿಸಿದ್ದು, ಸುಖಾಸುಮ್ಮನೆ ಅವರನ್ನು ತನಿಖಾ ಸಂಸ್ಥೆಗಳು ಆರೋಪಕ್ಕೆ ಗುರಿ ಮಾಡುತ್ತಿವೆ ಎಂದು ಆರೋಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.