ನವದೆಹಲಿ: ಐಟಿ/ಯಟಿಇಎಸ್ ಅಥವಾ ವಿಶೇಷ ಆರ್ಥಿಕ ವಲಯ (ಎಸ್ಇಜೆಡ್) ಉದ್ಯೋಗಿಗಳು ತಮ್ಮ ಮನೆಯಿಂದಲೇ ಕೆಲಸ ಮಾಡಲು ಅನುಮತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ವಾಣಿಜ್ಯ ಸಚಿವಾಲಯ ಐಟಿ/ಐಟಿಇಎಸ್ ಘಟಕದ ಉದ್ಯೋಗಿಗಳು ಮನೆಯಿಂದ ಅಥವಾ ಎಸ್ಇಜೆಡ್ ವಲಯದ ಬದಲು ಇತರ ಪ್ರದೇಶದಿಂದ ಕೆಲಸ ನಿರ್ವಹಿಸಲು ಕೆಲವು ಮಧ್ಯಸ್ಥಗಾರರು ಸ್ಪಷ್ಠೀಕರಣ ಕೋರಿ ಮನವಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ವಾಣಿಜ್ಯ ಸಚಿವಾಲಯ ಮನೆಯಿಂದ ಕೆಲಸ ನಿರ್ವಹಿಸಲು ಅನುಮತಿ ನೀಡಲು ನಿರ್ಧರಿಸಿದೆ.
ಎಸ್ಇಜೆಡ್ ಉದ್ಯೋಗಿಗಳ ಆವಶ್ಯಕತೆಯನ್ನು ಪರಿಗಣಿಸಿ ಮನೆಯಿಂದ ಕೆಲಸ ನಿರ್ವಹಿಸಲು ಕೆಲವು ನಿಯಮಗಳನ್ನು ಹೊರಡಿಸಿದೆ. ಈ ನಿಯಮಗಳ ಪ್ರಕಾರ ವ್ಯಕ್ತಿಯು ಎಸ್ಯಜೆಡ್ನ ಸಾಮಾನ್ಯ ಉದ್ಯೋಗಿಯಾಗಿದ್ದು, ಎಸ್ಇಜೆಡ್ ಘಟಕದ ಕಾರ್ಯಗಳನ್ನು ಕೈಗೊಳ್ಳಬೇಕು ಮತ್ತು ಘಟಕ ಆತನ ನಿಯಂತ್ರಣ ಹೊಂದಿರಬೇಕು.
ಮನೆಯಿಂದ ಕೆಲಸ ನಿರ್ವಹಿಸುವ ಉದ್ಯೋಗಿ ಎಸ್ಇಜೆಡ್ ಅನುಮೋದನೆ ನೀಡಿದ ಸೇವಾ ಕಾರ್ಯಗಳನ್ನು ಮಾತ್ರವೇ ನಿರ್ವಹಿಸಬಹುದು ಹಾಗೂ ಎಸ್ಇಜೆಡ್ ಯೋಜನೆಗೆ ಸಂಬಂಧುಸಿರಬೇಕು ಎಂದು ಸಚಿವಾಲಯ ಹೇಳಿದೆ.
ಉದ್ಯೋಗಿಗೆ ಲ್ಯಾಪ್ಟಾಪ್/ ಡೆಸ್ಕ್ಟಾಪ್ ಒದಗಿಸಿ, ಉದ್ಯೋಗಿ ಹಾಗೂ ಘಟಕದ ನಡುವೆ ಸಂಪರ್ಕ ಸಾಧಿಸಬೇಕು. ಉತ್ಪನ್ನಗಳು ಮತ್ತು ಸೇವೆಗಳ ಆದಾಯ ಉದ್ಯೋಗಿ ಕಾರ್ಯನಿರ್ವಹಿಸುತ್ತಿರುವ ಘಟಕಕ್ಕೆ ತಲುಪುವ ಬಗ್ಗೆ ಖಚಿತಪಡಿಸನೇಕು ಎಂದು ಸಚಿವಾಲಯ ಹೇಳಿದೆ.
ಎಸ್ಇಜೆಡ್ನ ಪ್ರಾಜೆಕ್ಟ್ ಪೂರ್ಣಗೊಂಡ ಬಳಿಕ ಸಂಬಂಧಿತ ಘಟಕದ ಅಧಿಕಾರಿಗೆ ಎಸಿಜೆಡ್ ನಿಯಮದ ಪ್ರಕಾರ ತನ್ನ ಐ-ಕಾರ್ಡ್ ಹಿಂದಿರುಗಿಸಬೇಕು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.