ಇಸ್ಲಾಮಾಬಾದ್ : ಕಾಶ್ಮೀರದಲ್ಲಿನ ಹಿಂಸಾಚಾರದ ಬಗ್ಗೆ ಅನಗತ್ಯವಾಗಿ ಮಾತನಾಡಿ ಮತ್ತೆ ಉಭಯ ದೇಶಗಳ ನಡುವೆ ವೈಮನಸ್ಸು ಮೂಡಿಸುವ ಉಗ್ರ ಮುಖ್ಯಸ್ಥನ ಕಾರ್ಯಕ್ಕೆ ಪಾಕಿಸ್ಥಾನ ಸರಕಾರ ಪ್ರೇರಣೆ ನೀಡುವುದನ್ನು ಮುಂದುವರೆಸುತ್ತಿದೆ.
ಇದೀಗ ಜಾಗತಿಕ ಭಯೋತ್ಪಾದಕ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಮುಖಂಡನಾಗಿರುವ ಸಯ್ಯದ್ ಸಲಾವುದ್ದೀನ್ ಭಾರತದ ವಿರುದ್ಧ ಅಣ್ವಸ್ತ್ರ ಯುದ್ಧ ನಡೆಸುವ ಬೆದರಿಕೆ ಹಾಕಿದ್ದಾನೆ.
ಕಾಶ್ಮೀರ ವಿಷಯದಿಂದಾಗಿಯೇ ಭಾರತ – ಪಾಕ್ ನಡುವೆ ಅಣ್ವಸ್ತ್ರ ಯುದ್ಧ ನಡೆಯಲಿದೆ ಎಂದು ಹೇಳಿದ್ದಾನೆ.
ರಾಷ್ಟ್ರೀಯ ತನಿಖಾ ದಳದ ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿರುವ ಸಲಾವುದ್ದೀನ್ ಕಾಶ್ಮೀರದಲ್ಲಿ ಸದ್ಯ ನಡೆಯುತ್ತಿರುವ ಸ್ವಾತಂತ್ರ್ಯ ಹೋರಾಟಕ್ಕೆ ಸಾಥ್ ನೀಡುವುದು ಪಾಕಿಸ್ಥಾನದ ಕರ್ತವ್ಯ. ನೈತಿಕವಾಗಿ, ರಾಜಕೀಯವಾಗಿ ಮತ್ತು ಸಾಂವಿಧಾನಿಕವಾಗಿ ಅದು ಬೆಂಬಲ ನೀಡುತ್ತದೆ ಎಂದಿದ್ದಾನೆ.
ಸ್ವ ಇಚ್ಛೆಯಿಂದಲೇ ಕಾಶ್ಮೀರಿಗರ ಹೋರಾಟಕ್ಕೆ ಪಾಕಿಸ್ಥಾನ ಬೆಂಬಲ ನೀಡುತ್ತಿದೆ. ಕಾಶ್ಮೀರ ವಿಷಯದಿಂದಾಗಿ ಉಭಯ ದೇಶಗಳ ನಡುವೆ ಅಣ್ವಸ್ತ್ರ ಯುದ್ಧ ನಡೆಯುವ ಸಾಧ್ಯತೆಗಳು ಹೆಚ್ಚಿದೆ.
ನಾಲ್ಕನೇ ಯುದ್ಧವನ್ನು ನಾನು ಊಹಿಸಬಲ್ಲೆ. ಕಾಶ್ಮೀರಿಗರು ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಅವರು ತಮ್ಮ ರಕ್ತದ ಕೊನೆಯ ಬಿಂದು ಹರಿಯುವವರೆಗೂ ಹೋರಾಟ ನಡೆಸಲಿದ್ದಾರೆ. ಶಸ್ತ್ರಾಸ್ತ್ರ ಜಿಹಾದ್ನ್ನು ಹೊರತುಪಡಿಸಿ ಅವರಿಗೆ ಬೇರೆ ಯಾವುದೇ ಆಯ್ಕೆ ಇಲ್ಲ ಎಂದಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.