ಭೋಪಾಲ್ : ಅತ್ಯಂತ ಪುರಾತನ ಮತ್ತು ಪವಿತ್ರ ಎಂದು ಪರಿಗಣಿಸಲಾಗುವ ವೇದಗಳಲ್ಲಿನ ವಿಜ್ಞಾನದ ಮೂಲಗಳನ್ನು ಕಂಡುಹಿಡಿಯಲು ಭೋಪಾಲ್ದ ಅಟಲ್ ಬಿಹಾರಿ ವಾಜಪೇಯಿ ಹಿಂದಿ ಯೂನಿವರ್ಸಿಟಿಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಂದಾಗಿದ್ದಾರೆ.
ವೇದ ಮತ್ತು ಭಾಸ್ಕರಾಚಾರ್ಯ ಆಚಾರ್ಯ ಕಣದ್ ಅವರ ಬರಗಳಲ್ಲಿರುವ ಆಧುನಿಕ ವಿಜ್ಞಾನದ ಬೇರುಗಳನ್ನು ಕಂಡು ಹಿಡಿಯುವ ಮಹತ್ವದ ಗುರಿಯನ್ನು ಈ ವಿದ್ಯಾರ್ಥಿಗಳು ಹೊಂದಿದ್ದಾರೆ.
ಈ ವಿಶ್ವವಿದ್ಯಾಲಯ ಇದೇ ಮೊದಲ ಬಾರಿಗೆ ಹಿಂದಿಯಲ್ಲಿ ಇಂಜಿನಿಯರಿಂಗ್ ಪಠ್ಯಗಳನ್ನು ಸಿದ್ಧಪಡಿಸುತ್ತಿದೆ.
ಇದರಿಂದ ವಿದ್ಯಾರ್ಥಿಗಳಿಗೆ ಪ್ರಾಚೀನ ಕಾಲದ ವೇದ, ವಿಜ್ಞಾನ ಪುರುಷರೆಂದು ಕರೆಯಲ್ಪಡುವ ಋಷಿ ಮುನಿಗಳಲ್ಲಿದ್ದ ಇಂಜಿನಿಯರಿಂಗ್ ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.
‘ಯಾವಾಗ ನಾವು ನಮ್ಮ ಋಷಿ ಮುನಿಗಳ ಶ್ರೀಮಂತ ಪರಂಪರೆಯ ಬಗ್ಗೆ ಮಾತನಾಡುತ್ತೇವೋ, ಕೆಲ ಜನ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಋಷಿಗಳು ಇಂಜಿನಿಯರಿಂಗ್, ವೈದ್ಯಕೀಯ, ಜ್ಯೋತಿಶ್ಯಾಸ್ತ್ರದಲ್ಲಿನ ನಾವಿನ್ಯತೆಗಳನ್ನು ಹೊರತಂದಿದ್ದಾರೆ’ ಎಂದು ಉಪಕುಲಪತಿ ಮೋಹನ್ಲಾಲ್ ತಿಳಿಸಿದ್ದಾರೆ.
ವಿದೇಶಿ ವಿಜ್ಞಾನಿಗಳ ಬಗ್ಗೆ ತಿಳಿಸುವ ಮುನ್ನ ನಾವು ನಮ್ಮ ವಿಜ್ಞಾನಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು. ವಿದೇಶಿ ವಿಜ್ಞಾನದಿಂದ ಮೂಲೆಗುಂಪಾಗಿರುವ ಭಾರತದ ವಿಜ್ಞಾನ ಮತ್ತು ಸಂಸ್ಕೃತಿಯನ್ನು ಪ್ರಚುರ ಪಡಿಸಬೇಕು ಎಂಬುದೇ ನಮ್ಮ ವಿಶ್ವವಿದ್ಯಾಲಯದ ಉದ್ದೇಶ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.