ಹೈದರಾಬಾದ್: ಎನ್ಟಿಪಿಸಿಯ ಮೊದಲ ಹಂತದ ತೆಲಂಗಾಣ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ (ಎಸ್ಟಿಪಿಪಿ)ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 7ರಂದು ಶಿಲಾನ್ಯಾಸ ಮಾಡಲಿದ್ದಾರೆ.
ಎನ್ಟಿಪಿಸಿ ಎರಡು ಹಂತದಲ್ಲಿ ಈ ಯೋಜನೆ ಜಾರಿಗೊಳಿಸಲಿದ್ದು, ಮೊದಲ ಹಂತದಲ್ಲಿ 1600 ಮೆಗಾವ್ಯಾಟ್ ಹಾಗೂ ಎರಡನೇ ಹಂತದಲ್ಲಿ 2400 ಮೆಗಾ ವ್ಯಾಟ್ ಯೋಜನೆಯನ್ನು ಸ್ಥಾಪಿಸಲಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಎನ್ಟಿಪಿಸಿ ಅಸ್ತಿತ್ವದಲ್ಲಿರುವ ರಾಮಗುಂಡಂ ಸ್ಥಾವರದ ಆವರಣದಲ್ಲಿರುವ ಭೂಪ್ರದೇಶದಲ್ಲಿ ಈ ಯೋಜನೆಯನ್ನು ಸ್ಥಾಪಿಸಲಾಗುತ್ತಿದೆ. 10,598.98 ಕೋಟಿ ರೂ. ವೆಚ್ಚದ ಈ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಆಂಧ್ರ ಪ್ರzದೇಶ ಮರುಸಂಗಟನೆ ಕಾಯಿದೆ 2014 ತೆಲಂಗಾಣ ರಾಜ್ಯದಲ್ಲಿ ಎನ್ಟಿಪಿಸಿ 4000 ಮೆಗಾ ವ್ಯಾಟ್ ವಿದ್ಯುತ್ ಯೋಜನೆ ಸ್ಥಾಪಿಸಲು ಅನುಮತಿಸಿದೆ. ಕಲ್ಲಿದ್ದಲ್ಲು ಗಣಿ ಸಚಿವಾಲಯ ಕಳೆದ ವರ್ಷ ಒಡಿಸಾದ ಮಂದಾಕಿನಿ-ಬಿ ಗಣಿಯಿಂದ 4000 ಮೆಗಾವ್ಯಾಟ್ ಕಲ್ಲಿದ್ದಲು ಗಣಿಯನ್ನು ತೆಲಂಗಾಣದ ಎಸ್ಟಿಪಿಪಿ ಸ್ಥಾಪನೆಗೆ ಎನ್ಟಿಪಿಸಿಗೆ ಮಂಜೂರು ಮಾಡಿದೆ.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿ ಇ.ಎಸ್.ಎಲ್. ನರಸಿಂಹನ್, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್, ಕೇಂದ್ರದ ರಾಜ್ಯ ವಿದ್ಯುತ್, ಕ್ಲಲಿದ್ದಲು ಸಚಿವ ಪಿಯುಶ್ ಗೋಯಲ್, ಕೇಂದ್ರ ಕಾರ್ಮಿಕ ಸಚಿವ ಬಂದಾರು ದತ್ತಾತ್ರೆಯ ಭಾಗವಹಿಸುವ ಸಾಧಯತೆ ಇದೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.