ರಿಯೋ : ಇಡೀ ವಿಶ್ವವೇ ಅತ್ಯಂತ ಕಾತುರದಿಂದ ಕಾಯುತ್ತಿದ್ದ ಒಲಿಂಪಿಕ್ಸ್ ಹಬ್ಬಕ್ಕೆ ಕೊನೆಗೂ ಚಾಲನೆ ದೊರೆತಿದೆ. ಬ್ರೆಝಿಲ್ನ ರಿಯೋದಲ್ಲಿ 31 ನೇ ಒಲಿಂಪಿಕ್ಸ್ನ್ನು ಅದ್ದೂರಿ ಸಮಾರಂಭದ ಮೂಲಕ ಆರಂಭಿಸಲಾಯಿತು.
ರಿಯೋದ ಮಾರಕಾನ ಸ್ಟೇಡಿಯಂನಲ್ಲಿ ನಡೆದ ಅಭೂತಪೂರ್ವ ಸಮಾರಂಭಕ್ಕೆ ಬ್ರೆಝಿಲ್ ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ಚಾಲನೆ ನೀಡಲಾಯಿತು.
ಚಿತ್ತಾಕರ್ಷಕ ಚಿತ್ತಾರಗಳು, ನೃತ್ಯ, ಹಾಡು, ಕುಣಿತಗಳು ಕ್ರೀಡಾಂಗಣದಲ್ಲಿ ನೆರೆದಿದ್ದ ಜನಸ್ತೋಮವನ್ನು ಮೂಕವಿಸ್ಮಿತಗೊಳಿಸಿದವು. ಬ್ರೆಝಿಲ್ ನಾಗರಿಕತೆ ಬೆಳೆದು ಬಂದ ಹಾದಿಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ವಿಶ್ವಕ್ಕೆ ಪರಿಚಯಿಸಲಾಯಿತು. 1500 ಕಲಾವಿದರು ಒಂದೇ ವೇದಿಕೆಯಲ್ಲಿ ವಿವಿಧ ಕಲೆಗಳ ಅನಾವರಣಗೊಳಿಸಿದ್ದು ವಿಶೇಷ.
ಬ್ರೆಝಿಲ್ನ ಮಾಜಿ ಮ್ಯಾರಥಾನ್ ಓಟಗಾರ ವಂಡರ್ ಡೇ ಲಿನೋ ಒಲಿಂಪಿಕ್ ಕ್ರೀಡಾ ಜ್ಯೋತಿ ಬೆಳಗಿಸಿದರು.
ಒಟ್ಟು 206 ದೇಶಗಳ 11 ಸಾವಿರ ಅಥ್ಲೇಟ್ಗಳು ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿದ್ದಾರೆ. ಭಾರತದಲ್ಲಿ 108 ಕ್ರೀಡಾಳುಗಳು ಭಾಗವಹಿಸುತ್ತಿದ್ದಾರೆ.
ಒಲಿಂಪಿಕ್ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಅವರು ಭಾರತದ ಧ್ವಜ ಹಿಡಿದು ಭಾರತೀಯ ತಂಡವನ್ನು ಪಥಸಂಚಲನದ ವೇಳೆ ಮುನ್ನಡೆಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.