ರಸ್ತೆ, ರೈಲು, ದೂರಸಂಪರ್ಕ ಯೋಜನೆಗಳ ಭರಪೂರ ನೆರವು
ನವದೆಹಲಿ: ಭಾರತದ ಈಶಾನ್ಯ ರಾಜ್ಯಗಳಲ್ಲಿ ರಸ್ತೆಗಳ ಸಂಪರ್ಕ ಜಾಲವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಒಟ್ಟು 197 ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ.
ಈ ಪೈಕಿ 37 ಯೋಜನೆಗಳು ಅರುಣಾಚಲ ಪ್ರದೇಶದಲ್ಲಿ, 68 ಯೋಜನೆಗಳು ಅಸ್ಸಾಂನಲ್ಲಿ, 21 ಮಣಿಪುರದಲ್ಲಿ, 22 ಮೇಘಾಲಯದಲ್ಲಿ,17 ಮಿಜೋರಾಮನಲ್ಲಿ, 10 ನಾಗಾಲ್ಯಾಂಡ್ನಲ್ಲಿ, 19 ಸಿಕ್ಕಿಂನಲ್ಲಿ ಹಾಗೂ 3 ತ್ರಿಪುರಾ ರಾಜ್ಯದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಇದಲ್ಲದೇ ಒಟ್ಟು ಈಶಾನ್ಯ ರಾಜ್ಯಗಳನ್ನು ರೈಲು ಸಂಪರ್ಕಕ್ಕೆ ಜೋಡಿಸುವ ನಿಟ್ಟಿನಲ್ಲಿ 13 ಹೊಸ ರೈಲು ಮಾರ್ಗ, 2 ಗೇಜು ಪರಿವರ್ತನೆ ಯೋಜನೆ ಹಾಗೂ 5 ದ್ವಿಪಥ ರಚನೆ ಯೋಜನೆಗಳು ಕೂಡ ಸಮಾನಾಂತರವಾಗಿ ಕೈಗೆತ್ತಿಕೊಳ್ಳಲಾಗಿದೆ.
ಹಾಗೆಯೇ ದೂರಸಂಪರ್ಕ ಅಭಿವೃದ್ಧಿ ಯೋಜನೆಯಡಿಯಲ್ಲಿ ಒಟ್ಟು 5336.18 ಕೋಟಿ ರೂ. ಯೋಜನೆಗಳನ್ನು ಕೂಡ ಕೈಗೆತ್ತಿಕೊಳ್ಳಲಾಗಿದೆ.
ಈ ಎಲ್ಲ ಯೋಜನೆಗಳು ಈಶಾನ್ಯ ರಾಜ್ಯಗಳ ವಿಕಾಸಕ್ಕಾಗಿ ರಚಿಸಲಾಗಿರುವ ಸಚಿವಾಲಯದ ಮೂಲಕ ನೆರವೇರಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.