News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಜಾದ್ ಜನ್ಮಸ್ಥಳದಿಂದ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಮೋದಿ ಚಾಲನೆ

Modi

ನವದೆಹಲಿ: ಆಗಸ್ಟ್ 9 ರಿಂದ ನಡೆಸಲು ಉದ್ದೇಶಿಸಲಾಗಿರುವ ಸ್ವಾತಂತ್ರ್ಯ ದಿನಾಚರಣೆಯ 70 ನೇ ಸಂಭ್ರಮಾಚರಣೆಯನ್ನು ಸ್ವಾತಂತ್ರ್ಯ ಸೇನಾನಿ ಚಂದ್ರಶೇಖರ್ ಆಜಾದ್ ಅವರ ಜನ್ಮಸ್ಥಳದಿಂದ ಆರಂಭಿಸಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ.

ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯ ಬಾವ್ರ ಆಜಾದ್ ಅವರ ಜನ್ಮಸ್ಥಳವಾಗಿದ್ದು, ಇಲ್ಲಿಂದ ಸರ್ಕಾರದ ಸ್ವಾತಂತ್ರ್ಯದ ಸಂಭ್ರಮಾಚರಣೆಗೆ ಚಾಲನೆ ದೊರಕಲಿದೆ.

ಆಗಸ್ಟ್ 9 ರಿಂದ ಎರಡು ವಾರಗಳ ಕಾಲ ಒಟ್ಟು 150 ಮಹತ್ವದ ಸ್ಥಳಗಳಿಗೆ ಭೇಟಿ ಕೊಡಲು ಕೇಂದ್ರ ಸಚಿವರುಗಳಿಗೆ ಮೋದಿ ಸೂಚಿಸಿದ್ದು, ಇದರಲ್ಲಿ ಆಜಾದ್ ಅವರ ಜನ್ಮಸ್ಥಳವೂ ಒಂದು.

150 ಸ್ಥಳಗಳ ಪೈಕಿ 100 ಸ್ಥಳಗಳು ಪಶ್ಚಿಮಬಂಗಾಳ ಮತ್ತು ಪಂಜಾಬ್‌ನಲ್ಲಿ ಇವೆ. ಸ್ವಾತಂತ್ರ್ಯ ಹೋರಾಟದ ಸೇನಾನಿಗಳನ್ನು ಸ್ಮರಿಸುವ ಮೂಲಕ ಜನರಲ್ಲಿ ದೇಶಪ್ರೇಮದ ಭಾವನೆಯನ್ನು ಉಕ್ಕಿಸುವ ಉದ್ದೇಶವೂ ಈ ಎರಡು ವಾರಗಳ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಇದೆ.

ಈ ಸಂಭ್ರಮಾಚರಣೆಗೆ ’70 ಸಾಲ್ ಆಜಾದಿ, ಯಾದ್ ಕರೋ ಕುರ್ಬಾನಿ’ಎಂಬ ಘೋಷ ವಾಕ್ಯವನ್ನೂ ನೀಡಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top