Tuesday, 12th December 2017
×
Home About Us Advertise With s Contact Us

ರಾಜ್‌ನಾಥ್ ಸಿಂಗ್ ಭಾಷಣಕ್ಕೆ ತಡೆ ನೀಡಿದ ಪಾಕ್

Rajnath

ಇಸ್ಲಾಮಾಬಾದ್ : ಆಘಾತಕಾರಿ ಬೆಳವಣಿಗೆಯಲ್ಲಿ ಪಾಕಿಸ್ಥಾನವು ಸಾರ್ಕ್ ಗೃಹ ಸಚಿವರ ಅಧಿವೇಶನದಲ್ಲಿ ಭಾರತದ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರ ಭಾಷಣಕ್ಕೆ ತಡೆ ನೀಡಲು ಪ್ರಯತ್ನಿಸಿದೆ.

ಸಾರ್ಕ್ ಸಭೆಯಲ್ಲಿ ರಾಜ್‌ನಾಥ್ ಅವರ ಭಾಷಣವನ್ನು ಚಿತ್ರೀಕರಿಸಲು ಯಾವ ಮಾಧ್ಯಮಕ್ಕೂ ಅವಕಾಶ ನೀಡಲಿಲ್ಲ. ಸಾರ್ಕ್ ಕಾನ್ಫರೆನ್ಸ್‌ನಲ್ಲಿ ರಾಜ್‌ನಾಥ್ ಅವರು ಮಧ್ಯಾಹ್ನದ ಊಟವನ್ನು ತಪ್ಪಿಸಿಕೊಂಡ ಬಳಿಕ ಈ ಘಟನೆ ನಡೆದಿದೆ.

ವಿಶೇಷವೆಂದರೆ ಪಾಕ್ ಗೃಹ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಅವರು ಕೂಡಾ ಗೈರಾಗಿದ್ದರು.

ತಮ್ಮ ಭಾಷಣದ ವೇಳೆ ರಾಜ್‌ನಾಥ್ ಅವರು ಉಗ್ರವಾದದ ವಿರುದ್ಧ ಕಟುವಾಗಿ ಮಾತನಾಡಿದ್ದಾರೆ. ಮಾತ್ರವಲ್ಲ ಗುಡ್ ಅಂಡ್ ಬ್ಯಾಡ್ ಟೆರರಿಸಂ ಎಂಬ ಪಾಕಿಸ್ಥಾನದ ವಿಭಾಗೀಕರಣವನ್ನೂ ವಿರೋಧಿಸಿದ್ದಾರೆ.

“ಭಯೋತ್ಪಾದನೆ ಎಂದರೆ ಭಯೋತ್ಪಾದನೆ. ಅದರಲ್ಲಿ ಕೆಟ್ಟದ್ದು, ಒಳ್ಳೆಯದು ಎಂಬುದಿಲ್ಲ” ಎಂದು ಇಸ್ಲಾಮಾಬಾದ್‌ನಲ್ಲಿ ನಡೆದ ಸಭೆಯಲ್ಲಿ ನೂರಾರು ಸಾರ್ಕ್ ನಾಯಕರ ಮುಂದೆ ಸಿಂಗ್ ಹೇಳಿದ್ದಾರೆ.

ಇದು ಆತಿಥೇಯ ಪಾಕ್‌ನ್ನು ತೀವ್ರ ಮುಜುಗರಕ್ಕೊಳಪಡಿಸಿದೆ.

ಅವರು ಉಗ್ರರ ವಿರುದ್ಧವಾಗಿ ಕಟುವಾಗಿ ಮಾತನಾಡುತ್ತಾರೆ ಎಂಬ ಕಾರಣದಿಂದಾಗಿ ರಾಜ್‌ನಾಥ್ ಅವರ ಭಾಷಣಕ್ಕೆ ಅಡ್ಡಿಪಡಿಸಲು ಪಾಕಿಸ್ಥಾನ ಮುಂದಾಗಿತ್ತು ಎನ್ನಲಾಗಿದೆ.

ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿಯನ್ನು ಹುತಾತ್ಮ ಎಂದು ಕರೆದಿರುವ ಪಾಕಿಸ್ಥಾನಕ್ಕೆ ಅದರ ನೆಲದಲ್ಲೇ ನಿಂತು ತಿರುಗೇಟು ನೀಡಿದ್ದ ರಾಜ್‌ನಾಥ್ ಉಗ್ರರನ್ನು ವೈಭವೀಕರಿಸುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top