ನವದೆಹಲಿ: ಏರ್ಟೆಲ್ ಹಾಗೂ ಐಡಿಯಾ ಕಂಪೆನಿಗಳು ತಮ್ಮ ಡಾಟಾ ದರಗಳನ್ನು ಕಡಿತಗೊಳಿಸಿದ ನಂತರ ಇದೀಗ ವೊಡಾಫೋನ್ ಕೂಡ ಅದೇ ಹಾದಿಯಲ್ಲಿ ಶೇ.67ರಷ್ಟು ಪ್ರಯೋಜನಗಳೊಂದಿಗೆ ತನ್ನ ಡಾಟಾ ದರಗಳನ್ನು ಕಡಿತಗೊಳಿಸಿದೆ.
ಈ ಯೋಜನೆಯಡಿ ವೊಡಾಫೋನ್ ತನ್ನ 2G, 3G, 4G ಸೇವೆಗಳ ಪ್ರಸ್ತುತ ಇರುವ ದರಗಳ ಮೇಲೆ ಶೇ.67ರಷ್ಟು ಹೆಚ್ಚುವರಿ ಡಾಟಾ ಲಾಭಗಳನ್ನು ಗ್ರಾಹಕರಿಗೆ ನೀಡಲಿದೆ.
ಪರಿಷ್ಕೃತ ಡಾಟಾ ಲಾಭಗಳ ಅಡಿಯಲ್ಲಿ ರೂ.650 ದರದ 3G/4G 3GB ಡಾಟಾವನ್ನು 5GBಗೆ ಹೆಚ್ಚಿಸಿದೆ. ಅದೇ ರೀತಿ ರೂ. 449ರ ಡಾಟಾ ಪ್ಯಾಕ್ನ 3G/4G 2GB ಡಾಟಾವನ್ನು ಶೇ.50ರಷ್ಟು ಹೆಚ್ಚುವರಿಯಾಗಿ 3GBಗೆ ಏರಿಕೆ ಮಾಡಿದೆ.
ಇನ್ನು ರೂ.999 3G/4G ಪ್ಯಾಕ್ ಶೇ.54ರಷ್ಟು ಹೆಚ್ಚುವರಿ ಲಾಭದೊಂದಿಗೆ 10GB ಡಾಟಾವನ್ನು ನೀಡಲಿದೆ.
5 ದಿನಗಳ ವ್ಯಾಲಿಡಿಯೊಂದಿಗೆ ರೂ.39ರ ಸ್ಯಾಶೆ ಪ್ಯಾಕ್ನ 160MB ಡಾಟಾವನ್ನು ಶೇ.41ರಷ್ಟು ಹೆಚ್ಚಿಸಿ 225 MBಗೆ ಏರಿಸಿದೆ. 1 ದಿನ ವ್ಯಾಲಿಡಿಟಿಯ ರೂ.12ರ 3G/4G 30 MB ಡಾಟಾವನ್ನು 50 MBಗೆ ಹೆಚ್ಚಿಸಿದೆ.
ಈ ಡಾಟಾ ಬೆಲೆಗಳು ವಲಯದಿಂದ ವಲಯಕ್ಕೆ ಬದಲಾಗಬಹುದು ಎಂದು ವೊಡಾಫೋನ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.