ನವದೆಹಲಿ: ಟೆಲಿಕಾಂ ಮತ್ತು ಅಂಚೆ ಕ್ಷೇತ್ರದಲ್ಲಿ ಜನಸಾಮಾನ್ಯರು ಮತ್ತು ಮಧ್ಯವರ್ತಿಗಳ ಸಮಸ್ಯೆಗಳು, ದೂರುಗಳನ್ನು ಟ್ವಟರ್ ಮೂಲಕ ಪರಿಹರಿಸಲು ಕೇಂದ್ರ ಸರ್ಕಾರ ಟ್ವಿಟರ್ ಸೇವೆಯನ್ನು ಆರಂಭಿಸಿದೆ.
ಈ ಯೋಜನೆಯನ್ನು ಕೇಂದ್ರದ ರಾಜ್ಯ ಸಂಪರ್ಕ ಸಚಿವ (ಸ್ವತಂತ್ರ ಹೊಣೆಗಾರಿಕೆ) ಮನೋಜ್ ಸಿನ್ಹಾ ಬಿಡುಗಡೆಗೊಳಿಸಿದರು.
ಜನರು ತಮ್ಮ ದೂರುಗಳನ್ನು ಟ್ವಿಟರ್ ಸೇವೆ @manojsinhabjpಗೆ #DOTSeva, #BSNLSeva, #MTNLSeva ಅಥವಾ #PostalSeva ಹ್ಯಾಷ್ಟ್ಯಾಗ್ನೊಂದಿಗೆ ನಮೂದಿಸಬಹುದಾಗಿದೆ.
ಪ್ರಧಾನಿ ನರೇಂದ್ರ ಮೊದಿ ಅವರ ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ'(minimum government, maximum governance) ದೃಷ್ಟಿಕೋನದಿಂದ ಬಿಡುಗಡೆ ಮಾಡಲಾಗಿದೆ. ಈ ನೇರ ಸಂವಹನದ ಸಹಾಯದಿಂದ ಸರ್ಕಾರ ಪಾರದರ್ಶಕ, ಪ್ರತಿಕ್ರಿಯಾಶೀಲ ಮತ್ತು ಜವಾಬ್ದಾರಿಯುತ ಆಡಳಿತ ಒದಗಿಸಲಿದೆ ಎಂದು ಸಿನ್ಹಾ ಹೇಳಿದ್ದಾರೆ.
ಟೆಲಿಕಾಂ ಸಚಿವಾಲಯ ಮತ್ತು ಅಂಚೆ ಇಲಾಖೆ ಟ್ವಟರ್ ಸೇವೆಯ ದೂರುಗಳ ಒಂದು ಪಟ್ಟಿ ಮಾಡಿ ತಕ್ಷಣದ, ಮಧ್ಯಾವಧಿ ಮತ್ತು ದೀರ್ಘಕಾಲದ ದೂರುಗಳನ್ನು ವರ್ಗೀಕರಿಸಲಿದೆ ಎಂದು ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ.
ಭಾರತ ವಿಶ್ವದಲ್ಲೇ ಅತೀ ದೊಡ್ಡ ಅಂಚೆ ಸಂಪರ್ಕ ಹೊಂದಿದೆ ಹಾಗೂ ಮೊಬೈಲ್ ಗ್ರಾಹಕರ ಸಂಖ್ಯೆ 1 ಬಿಲಿಯನ್ ದಾಟಿದ್ದು ಇದೊಂದು ದೊಡ್ಡ ಸವಾಲಾಗಲಿದೆ ಎಂದು ಸಿನ್ಹಾ ಈ ವೇಳೆ ಹೇಳಿದ್ದಾರೆ.