ಜೋರ್ಹತ್: ಅಸ್ಸಾಂನಲ್ಲಿ ಸಂಭವಿಸಿದ ಭೀಕರ ನೆರೆಯಿಂದಾಗಿ ಕಾಜಿರಂಗ ನ್ಯಾಷನಲ್ ಪಾರ್ಕ್ನಲ್ಲಿನ 250 ಪ್ರಾಣಿಗಳು ಸಾವಿಗೀಡಾಗಿವೆ. ಇದರಲ್ಲಿ ಅಪರೂಪದ ಪ್ರಾಣಿಗಳೆನಿಸಿದ ಕೊಂಬುಗಳುಳ್ಳ 20 ಖಡ್ಗಮೃಗಗಳೂ ಸೇರಿವೆ.
ನೆರೆಯಲ್ಲಿ ಸಂಕಷ್ಟಕ್ಕೀಡಾದ 20 ಖಡ್ಗಮೃಗದ ಮರಿಗಳೂ ಸೇರಿದಂತೆ ಒಟ್ಟು 200 ಪ್ರಾಣಿಗಳನ್ನು ರಕ್ಷಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬ್ರಹ್ಮಪುತ್ರ ನದಿಯ ನೀರು ಈ ವಿಶ್ವಪಾರಂಪರಿಕ ಪಾರ್ಕ್ಗೆ ಬಂದಪ್ಪಳಿಸಿದ ಕಾರಣ ಒಟ್ಟು 250 ಪ್ರಾಣಿಗಳು ಬಲಿಯಾಗಿವೆ ಎಂದು ವರದಿಗಳು ತಿಳಿಸಿವೆ.
ಇದುವರೆಗೆ ಯಾವುದೇ ಹುಲಿಗಳು ಸತ್ತಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅವುಗಳು ಮಾನವರ ವಾಸಸ್ಥಳದತ್ತ ಪಲಾಯನ ಮಾಡಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಪ್ರಾಣಿಗಳ ಪೈಕಿ 20 ಖಡ್ಗಮೃಗ, 150 ಹೋಗ್ ಡಿಯರ್, 9 ಸಾಂ ಡಿಯರ್, 4 ಕಾಡುಕೋಣ ಮುಂತಾದ ಹಲವು ಅಪರೂಪದ ಪ್ರಾಣಿಗಳು ಸೇರಿವೆ.
ನೆರೆ ಬಂದು ಹೋದ ಬಳಿಕ ಪ್ರಾಣಿಗಳಿಗೆ ಪಾರ್ಕ್ನಲ್ಲಿ ಆಹಾರದ ಅಭಾವ ಸೃಷ್ಟಿಯಾಗಿರುವ ಭೀತಿ ಎದುರಾಗಿದೆ. ಅಲ್ಲದೆ ಈ ಕಾಡು ಮೃಗಗಳು ನಗರದತ್ತ ಪಲಾಯನ ಮಾಡುವ ಸಂಭವವೂ ಇದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.