ನವದೆಹಲಿ: ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ತನ್ನ ಅಂತಿಮ ಮಾರ್ಗಸೂಚಿ ಜಾರಿಗೊಳಿಸಿದ ಬಳಿಕ ಕೋಲಾ ರಹಿತ ಹಣ್ಣಿನ ರಸಗಳ ಪಾನೀಯಗಳನ್ನು ಹೊರತರುವುದಾಗಿ ಪೆಪ್ಸಿಕೋ ಮತ್ತು ಕೋಕಾ ಕೋಲಾ ಕಂಪನೆಗಳು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಫಾಂಟಾ ಗ್ರೀನ್ ಮ್ಯಾಂಗೋ ಭಾರತದಲ್ಲಿ ದೊರೆಯುತ್ತಿರುವ ಏಕಮಾತ್ರ ಹಣ್ಣಿನ ಅಂಶವಿರುವ (ಶೇ.10.4) ಪಾನೀಯವಾಗಿದೆ. ಇನ್ನೊಂದೆಡೆ ನಿಂಬೂಸ್ ಮಸಾಲಾ ಸೋಡಾ (ಶೇ.5ರಷ್ಟು ನಿಂಬೆ ರಸ) ಪೆಪ್ಸಿಕೋ ಇಂಕ್ ಕಂಪೆನ ಮಾರಾಟ ಮಾಡುತ್ತಿರುವ ಏಕೈಕ ಹಣ್ಣು ಆಧಾರಿತ ಪಾನೀಯವಾಗಿದೆ.
ಭಾರತದ ರೈತರ ಹಣ್ಣುಗಳ ಮಾರಾಟ ವೃದ್ಧಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾಸ್ನಿಂದ ಕೂಡಿದ ಪಾನೀಯಗಳಲ್ಲಿ ನೈಸರ್ಗಿಕ ಹಣ್ಣಿನ ರಸ (ಶೇ.5) ಮಿಶ್ರಣ ಮಾಡುವಂತೆ ಬಹುರಾಷ್ಟ್ರೀಯ ಕಂಪೆನಿಗಳಾದ ಪೆಪ್ಸಿಕೋ ಮತ್ತು ಕೋಕಾ ಕೋಲಾ ಕಂಪೆನಿಗಳಿಗೆ ಮನವಿ ಮಾಡಿದ್ದರು.
ಎಫ್ಎಸ್ಎಸ್ಎಐ ಜೊತೆ ಕಂಪೆನಿ ಕಾರ್ಯನಿರ್ವಹಿಸಿಸುತ್ತಿದ್ದು, ಇದರ ಕರಡು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅಂತಿಮ ಮಾರ್ಗಸೂಚಿ ಪಡೆದ ಬಳಿಕ ಭಾರತದಲ್ಲಿ ಮಾರಾಟ ಮಾಡಲು ಉತ್ಪನ್ನಗಳನ್ನು ನಿರ್ಧರಿಸಲಾಗುವುದು ಎಂದು ಕೋಕಾ ಕೋಲಾ ಇಂಡಿಯಾ (ಭಾರತ ಮತ್ತು ನೈಋತ್ಯ ಏಷ್ಯಾ) ಅಧ್ಯಕ್ಷ ವೆಂಕಟೇಶ್ ಕಿಣಿ ಹಾಗೂ ಪೆಪ್ಸಿಕೋ ಕಂಪೆನಿ ವಕ್ತಾರರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.