ನ್ಯೂಯಾರ್ಕ್ : ನ್ಯೂಯಾರ್ಕ್ ಮೂಲದ ಆನಿವಾಸಿ ಭಾರತೀಯನಾಗಿರುವ ಶ್ರೀ ಶ್ರೀನಿವಾಸನ್ ಅವರು ಸೋಮವಾರ ನ್ಯೂಯಾರ್ಕ್ ನಗರದ ಮುಖ್ಯ ಡಿಜಿಟಲ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ.
ನಗರದ ಮೇಯರ್ ಬಿಲ್ ಡೆ ಬ್ಲಾಸ್ಯೋ ಅವರು ಶ್ರೀನಿವಾಸನ್ ಅವರ ನೇಮಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
“21 ನೇ ಶತಮಾನಕ್ಕೆ ಅನುಗುಣವಾಗಿ, ಡಿಜಿಟಲ್ ಎಕೋಸಿಸ್ಟಮ್ನ್ನು ಮುನ್ನಡೆಸುವ ಸಲುವಾಗಿ ನಗರದ ಸಂಪನ್ಮೂಲ ಪ್ರತಿ ನ್ಯೂಯಾರ್ಕಿಗನ ಬೆರಳ ತುದಿಯಲ್ಲಿದೆ ಎಂಬುದನ್ನು ಖಚಿತಪಡಿಸಬೇಕಾಗಿದೆ. ಅಪಾರ ಹೊಂದಿರುವ ಶ್ರೀನಿವಾಸನ್ ನಮ್ಮ ಡಿಜಿಟಲ್ ಟೂಲ್ಸ್ನಲ್ಲಿ ಪಾರದರ್ಶಕತೆ, ಪ್ರಗತಿ ತರುತ್ತಾರೆ ಎಂದು ಬ್ಲಾಸ್ಯೋ ಅಭಿಪ್ರಾಯಿಸಿದ್ದಾರೆ.
ಶ್ರೀನಿವಾಸನ್ ಅವರು ಸಿವಿಕ್ ಎಂಗೇಜ್ಮೆಂಟ್ನೊಂದಿಗೆ ಕೇಂದ್ರೀಕರಿಸಿದ ಡಿಜಿಟಲ್ ಪ್ರೊಡಕ್ಟ್ ಅನ್ನು ಚಾಲನೆ ನೀಡುವ ಮೂಲಕ ಡಿಜಿಟಲ್ ಸ್ಟ್ರಾಟೆಜಿಗೆ ನಿರ್ದೇಶನ ನೀಡಲಿದ್ದಾರೆ.
ಇದರಿಂದ ಸರಕಾರದಲ್ಲಿ ಪಾರದರ್ಶಕತೆ ಹೆಚ್ಚುತ್ತದೆ ಮತ್ತು ನ್ಯೂಯಾರ್ಕ್ ಸಿಟಿಯ ಟೆಕ್ನಾಲಜಿ ಕೂಡಾ ಬೆಳೆಯುತ್ತದೆ ಎಂದು ಆನ್ಲೈನ್ ಪೋರ್ಟಲ್ meritalk.com ಅಭಿಪ್ರಾಯಪಟ್ಟಿದೆ.
ತನ್ನ ನೇಮಕದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀನಿವಾಸನ್ ಜಗತ್ತಿನ ಅತಿ ಶ್ರೇಷ್ಠ ನಗರದ ಸಿಡಿಓ ಆಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನಗೆ ಸಿಕ್ಕ ಅತಿ ದೊಡ್ಡ ಗೌರವ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.