ನವದೆಹಲಿ : ಹಿರಿಯ ಅಧಿಕಾರಿ ಭಾಸ್ಕರ್ ಕುಲ್ಬೇ ಅವರು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಅವರು ಪ್ರಸ್ತುತ ಪ್ರಧಾನಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕುಲ್ಬೇ ಅವರನ್ನು ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸುವ ಪ್ರಸ್ತಾವನೆಗೆ ಸಂಪುಟದ ಆಯ್ಕೆ ಸಮಿತಿಯು ಅನುಮೋದನೆ ನೀಡಿದೆ.
ಪರ್ಸನಲ್ ಅಂಡ್ ಟ್ರೈನಿಂಗ್ ಡಿಪಾರ್ಟ್ಮೆಂಟ್ ಈ ಆದೇಶವನ್ನು ಹೊರಹಾಕಿದೆ.
ಕುಲ್ಬೇ ಅವರು ಪಶ್ಚಿಮ ಬಂಗಾಳ ಕೇಡರ್ನ ೧೯೮೩ ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿದ್ದಾರೆ.
ಸಂಪುಟ ಕಾರ್ಯದರ್ಶಿಗಳ ಕಾರ್ಯಗಳ ಮತ್ತು ಸರಕಾರದ ಕೆಲವೊಂದು ಕೆಲಸಗಳ ಬಗ್ಗೆ ಪರಿಶೀಲನೆ ನಡೆಸುವ ಜವಾಬ್ದಾರಿ ಇನ್ನು ಮುಂದೆ ಕುಲ್ಬೇ ಅವರ ಮೇಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.