×
Home About Us Advertise With s Contact Us

ಮಿಶನರಿ ಶಾಲೆಗೆ ಬೆದರಿಕೆ ಕರೆ

schoolಕೋಲ್ಕತ್ತಾ: ಪಶ್ಚಿಮಬಂಗಾಳದ ಮಿಶನರಿ ಶಾಲೆಯೊಂದಕ್ಕೆ ಬೆದರಿಕೆ ಪತ್ರ ಮತ್ತು  ದೂರವಾಣಿ ಕರೆಗಳು ಬರುತ್ತಿವೆ. ಶಾಲೆಯನ್ನು ಮುಚ್ಚಿ ಇಲ್ಲವಾದರೆ ನಾವು ಶಾಲೆಯನ್ನು ಸುಟ್ಟು ಹಾಕತ್ತೇವೆ ಎಂದು ಬೆದರಿಕೆ ಹಾಕಲಾಗುತ್ತಿದೆ.

ಈ ಬೆದರಿಕೆಯಿಂದಾಗಿ ಶಾಲೆ ಆತಂಕಕ್ಕೀಡಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರನ್ನೂ ನೀಡಿದೆ. ಪ್ರಸ್ತುತ ಶಾಲೆಯಲ್ಲಿ ಪೊಲೀಸರನ್ನು ನಿಯೋಜಿಸಿ ರಕ್ಷಣೆ ನೀಡಲಾಗುತ್ತಿದೆ.

ಇತ್ತೀಚಿಗಷ್ಟೇ ಕಾನ್ವೆಂಟ್‌ವೊಂದಕ್ಕೆ ನುಗ್ಗಿದ್ದ ದುಷ್ಕರ್ಮಿಗಳು 71 ವರ್ಷದ ಕ್ರೈಸ್ಥ ಸನ್ಯಾಸಿನಿಯ ಮೇಲೆ ಅತ್ಯಾಚಾರ ಎಸಗಿದ್ದರು. ಇದೀಗ ಮಿಶನರಿ ಶಾಲೆಗೆ ಬೆದರಿಕೆ ಕರೆ ಬಂದಿರುವುದು ಆತಂಕಕ್ಕೀಡು ಮಾಡಿದೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top