×
Home About Us Advertise With s Contact Us

ಪಾಕ್ ಧ್ವಜ ಆರೋಹಣ: ಪ್ರತ್ಯೇಕತಾವಾದಿ ವಿರುದ್ಧ ಪ್ರಕರಣ

andrabiಶ್ರೀನಗರ: ಪಾಕಿಸ್ಥಾನದ ರಾಷ್ಟ್ರೀಯ ದಿನದಂದು ಕಾಶ್ಮೀರದಲ್ಲಿ ಪಾಕಿಸ್ಥಾನ ಬಾವುಟದ ಧ್ವಜಾರೋಹಣ ಮಾಡಿದ ದುಖ್ತರನ್-ಇ-ಮಿಲ್ಲತ್‌ನ ಮುಖ್ಯಸ್ಥೆ ಆಸಿಯಾ ಅಂದ್ರಾಂಬಿ ವಿರುದ್ಧ ಬುಧವಾರ ಪ್ರಕರಣ ದಾಖಲಿಸಲಾಗಿದೆ.

‘ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿಯಲ್ಲಿ ಸೆಕ್ಷನ್ 13ರ ಅನ್ವಯ ಅಂದ್ರಾಂಬಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರತ್ಯೇಕತಾವಾದಿ ನಾಯಕಿ ಆಗಿರುವ ಅಂದ್ರಾಂಬಿ ತಾನು ಪಾಕಿಸ್ಥಾನದ ಧ್ವಜಾರೋಹಣ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದಾಳೆ. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆಯನ್ನೂ ಕೈಗೊಂಡಿದ್ದಾರೆ.

ಮಾ.23ರಂದು ಪಾಕಿಸ್ಥಾನದ ರಾಷ್ಟ್ರೀಯ ದಿನಾಚರಣೆಯ ದಿನದಂದು ಅಂದ್ರಾಂಬಿ ಪಾಕಿಸ್ಥಾನ ಬಾವುಟದ ಧ್ವಜಾರೋಹಣ ಮಾಡಿ ಅಲ್ಲಿನ ರಾಷ್ಟ್ರೀಯ ಗೀತೆಯನ್ನು ಹಾಡಿದ ಎಂದು ಮಾಧ್ಯಮಗಳು ಸುದ್ದಿ ಪ್ರಕಟಿಸಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top