Tuesday, 20th February 2018
×
Home About Us Advertise With s Contact Us

ಮಾ. 31 ರಿಂದ ಏ. 2 ರ ವರೆಗೆ ಸೌಹಾರ್ದ ಸಂಗಮ ಕಾರ್ಯಕ್ರಮ

Belthangady NEWSಬೆಳ್ತಂಗಡಿ : ಸಬರಬೈಲು ವಾದಿ ಇರ್ಫಾನ್ ಅಕಾಡೆಮಿಕ್ ಸೆಂಟರ್ ಸಬರಬೈಲು ಮದ್ದಡ್ಕ ಇದರ ವತಿಯಿಂದ ರಿಫಾಯಿ ರಾತೀಬ್ ಪ್ರಥಮ ವಾರ್ಷಿಕ ಸಮ್ಮೇಳನ, ನೂತನ ಕಟ್ಟಡದ ಉದ್ಘಾಟನೆ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮಗಳು ಮಾ. 31 ರಿಂದ ಏ. 2 ರ ವರೆಗೆ ನಡೆಯಲಿದೆ ಎಂದು ಸಂಸ್ಥೆಯ ಚೇರ್‌ಮೆನ್ ಸಯ್ಯಿದ್ ಫಝಲ್ ಜಮಲುಲ್ಲೈಲಿ ತಂಙಳ್ ತಿಳಿಸಿದರು.

ಅವರು ಮಂಗಳವಾರ ವಾರ್ತಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮದ ವಿವರ ನೀಡಿದರು. ಮಾ. 31 ರಂದು ಕಾರ್ಯಕ್ರಮದ ಉದ್ಘಾಟನೆಯ ಪ್ರಯುಕ್ತ ಅನಸ್ ಸಿದ್ದೀಖಿ ಸಖಾಫಿ ಮಳ್‌ಹರ್ ಕೇರಳ ಅವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಏಪ್ರಿಲ್ 1 ರಂದು “ಮಿಸ್ಕಾತುಲ್ ಮದೀನಾ ಬುರ್ದಾ ಸಂಘ”ದಿಂದ ಜಾಫರ್ ಸಅದಿ ನೇತೃತ್ವದಲ್ಲಿ ರಿಫಾಯಿ ಮಾಲ ಆಲಾಪನೆ, ಆ ದಿನ ರಾತ್ರಿ ನೌಫಲ್ ಸಖಾಫಿ ಕಳಸ ಅವರಿಂದ “ನೂತನವಾದದ ಅನಾವರಣ” ಕ್ಲಿಪ್ಪಿಂಗ್ ಪ್ರಭಾಷಣ ನಡೆಯಲಿದೆ.

ಏಪ್ರಿಲ್ 2 ರಂದು ಸಂಜೆ 4 ಗಂಟೆಗೆ ರಿಫಾಯಿ ರಾತೀಬು ನಡೆಯಲಿದೆ. ಸಂಜೆ 5 ಗಂಟೆಗೆ ಸೌಹಾರ್ದ ಸಂಗಮ ಕಾರ್ಯಕ್ರಮ ಸ್ವಾಗತ ಸಮಿತಿ ಅಧ್ಯಕ್ಷ ಅಬ್ಬೋನು ಮದ್ದಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಶಾಸಕ ವಸಂತ ಬಂಗೇರ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಶಾಫಿ ಸಅದಿ ಬೆಂಗಳೂರು, ಆರೋಗ್ಯ ಸಚಿವ ಯು.ಟಿ ಖಾದರ್, ಶಾಸಕ ಐವನ್ ಡಿಸೋಜಾ, ಮಂಗಳೂರು ನಗರ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎನ್. ಬಿ ಅಬೂಬಕ್ಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ಎನ್. ಎ ಗೋಪಾಲ ಶೆಟ್ಟಿ, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ನಝೀರ್ ಬೆಳ್ತಂಗಡಿ, ವಕ್ಫ್ ಬೋರ್ಡ್ ನಿಕಟಪೂರ್ವ ಸದಸ್ಯ ಯು. ಕೆ ಮುಹಮ್ಮದ್ ಹನೀಫ್ ಮೊದಲಾದವರು ಭಾಗವಹಿಸಲಿದ್ದಾರೆ.

ಅಂದು ಸಂಜೆ 6-30ಕ್ಕೆ ನೂತನ ಕಟ್ಟಡದ ಉದ್ಘಾಟನೆ, ರಾತ್ರಿ ಸಯ್ಯಿದ್ ಇಬ್ರಾಹೀಂ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ಅವರ ನೇತೃತ್ವದಲ್ಲಿ ಧಾರ್ಮಿಕ ಸಮ್ಮೇಳನ ಸಮಾರೋಪ ನಡೆಯಲಿದೆ. ತಾಲೂಕು ಸುನ್ನೀ ಸಂಯುಕ್ತ ಜಮಾತ್ ಅಧ್ಯಕ್ಷ ಸಯ್ಯಿದ್ ಸಾದಾತ್ ತಂಙಳ್ ಉದ್ಘಾಟನೆ ನೆರವೇರಿಸಲಿದ್ದಾರೆ. ಧಾರ್ಮಿಕ ವಿದ್ವಾಂಸರಾದ ಶಮೀರ್ ಅಶ್ರಫಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಲ್‌ಜಅ ತಂಙಳ್, ಕಾಜೂರು ತಂಙಳ್, ಮನ್‌ಶರ್ ತಂಙಳ್, ಕಲ್ಲೇರಿ ತಂಙಳ್, ಇಸ್ಮಾಯಿಲ್ ತಂಙಳ್, ಮುರ ತಂಙಳ್, ಸಲಾಂ ತಂಙಳ್, ಸೇರಿದಂತೆ ಅನೇಕ ಸಯ್ಯಿದರುಗಳು, ಡಾ| ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಸೇರಿದಂತೆ ಅನೇಕ ಮಂದಿ ವಿದ್ವಾಂಸರುಗಳು, ಸಾಮಾಜಿಕ ರಾಜಕೀಯ ಕ್ಷೇತ್ರದ ಗಣ್ಯರುಗಳು ಭಾಗವಹಿಸಲಿದ್ದಾರೆ.

ಪತ್ರಿಕಾ ಗೋಷ್ಟಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಅಬ್ಬೋನು ಮದ್ದಡ್ಕ, ಸಯ್ಯಿದ್ ಎಸ್. ಎಮ್. ಕೋಯ, ಉಮರ್‌ಕುಂಞಿ ನಾಡ್ಜೆ, ಮೆನೇಜರ್ ಪಿ. ಯು ಆಲಿಕುಂಞಿ ಸಖಾಫಿ ನಾವೂರು, ಎಂ. ಎ. ಕಾಸಿಂ ಮುಸ್ಲಿಯಾರ್ ಮಾಚಾರು, ಯು. ಹೆಚ್. ಮುಹಮ್ಮದ್ ಉಜಿರೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top