News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

44 ಸಂಸದರುಳ್ಳ ಕಾಂಗ್ರೆಸ್‌ಗೆ 52 ವಕ್ತಾರರು

congressನವದೆಹಲಿ: 44 ಸಂಸದರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಬರೋಬ್ಬರಿ 52 ವಕ್ತಾರರನ್ನು ನೇಮಕ ಮಾಡಿಕೊಂಡಿದೆ.

4 ಹಿರಿಯ ವಕ್ತಾರರು, 17 ಹೊಸ ವಕ್ತಾರರು, 31 ಮೀಡಿಯಾ ಪ್ಯಾನಲಿಸ್ಟ್ ಮತ್ತು ಇಬ್ಬರು ಮಾಧ್ಯಮ ಸಂಯೋಜಕರನ್ನು ಬುಧವಾರ ಕಾಂಗ್ರೆಸ್ ಘೋಷಿಸಿದೆ.

ಸಿಪಿ ಜೋಶಿ, ಅಜಯ್ ಮಕೇನ್, ಸತ್ಯಬ್ರತ್ ಚತುರ್ವೇದಿ ಮತ್ತು ಶಕೀಲ್ ಅಹ್ಮದ್ ಅವರು ಹಿರಿಯ ವಕ್ತಾರರಾಗಿ ನೇಮಕಗೊಂಡಿದ್ದಾರೆ. ಹೊಸ ಮುಖಗಳಾದ ನಟಿ ಕುಷ್ಬೂ, ಗೌರವ್ ಗೋಗಯ್, ಸುಶ್ಮಿತ ದೆಬ್ ಮುಂತಾದವರನ್ನು ಹೊಸ ವಕ್ತಾರರಾಗಿ ನೇಮಿಸಲಾಗಿದೆ.

ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುವ ಯೋಜನೆಯನ್ನು ರೂಪಿಸಿಕೊಂಡಿರುವ ಕಾಂಗ್ರೆಸ್ ಅದಕ್ಕೆ ಬೇಕಾದ ಸಾಮರ್ಥ್ಯ ಹೊಂದಿರುವ ವಕ್ತಾರರ ಆರ್ಮಿಯನ್ನು ಕಟ್ಟಿಕೊಂಡಿದೆ.

ಅದೇನೆಯಿರಲಿ ಲೋಕಸಭೆಯಲ್ಲಿ ಕೇವಲ 44 ಸದಸ್ಯರನ್ನು ಹೊಂದಿದ್ದರೂ 52 ವಕ್ತಾರರನ್ನು ನೇಮಿಸಿಕೊಳ್ಳುವ ಮೂಲಕ ಕಾಂಗ್ರೆಸ್ ತನ್ನ ಬಲವರ್ಧನೆಗೆ ಮುಂದಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top