ಮುಂಬಯಿ: ಇತ್ತೀಚಿನ ದಿನಗಳಲ್ಲಿ ಧರಣಿ, ಪ್ರತಿಭಟನೆಗಳನ್ನು ನಡೆಸುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಎಷ್ಟೇ ಹೋರಾಟ ಮಾಡಿದರೂ ಆಗ ಬೇಕಾದ ಕಾರ್ಯ ಮಾತ್ರ ಸರ್ಕಾರದ ಕಡೆಯಿಂದ ಆಗುವುದೇ ಇಲ್ಲ. ಇದೇ ರೀತಿ ಪ್ರತಿಭಟನೆ ನಡೆಸಿ ನಡೆಸಿ ಸುಸ್ತಾದ ಮಹಾರಾಷ್ಟ್ರದ ಬುಲ್ದಾನದ ನಾಗರಿಕರು ಕೊನೆಗೆ ಅಧಿಕಾರಿಗಳ ಗಮನ ಸೆಳೆಯಲು ನಾಗಿನ್ ನೃತ್ಯ ಮಾಡಿದ ಪ್ರಸಂಗ ನಡೆದಿದೆ.
ಸಾರ್ವಜನಿಕ ಕಾರ್ಯ ಇಲಾಖೆಯೊಳಗೆ ನುಗ್ಗಿದ ಜನ ಅಧಿಕಾರಿಗಳಿಗೆ ಮೊದಲು ಹೂವಿನ ಹಾರಗಳನ್ನು ಹಾಕಿದ್ದಾರೆ. ಬಳಿಕ ಅವರ ಎದುರು ಕಛೇರಿಯೊಳಗೆಯೇ ನಾಗಿನ್ ನೃತ್ಯ ಮಾಡಲಾರಂಭಿಸಿದ್ದಾರೆ. ಅವರ ಮೀಟಿಂಗ್ಗೆ ಭಂಗ ತಂದಿದ್ದಾರೆ.
ಛತ್ರಪತಿ ಶಿವಾಜಿ ಸಮೀಪದ ರಸ್ತೆಯನ್ನು ರಿಪೇರಿ ಮಾಡುವಂತೆ ಇಲ್ಲಿನ ಜನ ಅಧಿಕಾರಿಗಳನ್ನು ಅಂಗಲಾಚುತ್ತಲೇ ಬಂದಿದ್ದಾರೆ. ಆದರೆ ಅವರು ಮಾತ್ರ ಜಾಣ ಕಿವುಡುತನ ಪ್ರದರ್ಶಿಸಿದ್ದಾರೆ. ಇದಕ್ಕೆ ಗಾಂಧೀಗಿರಿ ಮೂಲಕ ಅಧಿಕಾರಿಗಳನ್ನು ಎಚ್ಚರಿಸುವ ಸಲುವಾಗಿ ಅವರ ಮುಂದೆ ನಾಗಿನ್ ಡ್ಯಾನ್ಸ್ ಮಾಡಿದ್ದಾರೆ. ಇದನ್ನು ನೋಡಿ ಅಧಿಕಾರಿಗಳು ತಲೆ ತಲೆ ಚಚ್ಚಿಕೊಂಡಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.