ಗುಜರಾತ್ : ಗುಜರಾತ್ ಸರಕಾರ ಮೀಸಲಾತಿ ಪಟ್ಟಿಯಲ್ಲಿಲ್ಲದ ಹಾಗೂ ಆರ್ಥಿಕವಾಗಿ ಹಿಂದುಳಿದ ಜಾತಿಗಳಿಗೆ ಸರಕಾರಿ ಉದ್ಯೋಗ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 10 ರಷ್ಟು ಮೀಸಲಾತಿಯನ್ನು ಘೋಷಿಸಿದೆ.
ಗುಜರಾತ್ ಸರಕಾರ ಪ್ರಕಟಿಸಿರುವ ಈ ಮೀಸಲಾತಿ ಪ್ರಸ್ತುತ ಈಗಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಅಸ್ತಿತ್ವದಲ್ಲಿರುವ 49% ಮೀಸಲಾತಿ ಜೊತೆಗೆ ಈ ಹೊಸ ಮೀಸಲಾತಿಯೂ ಜಾರಿಯಲ್ಲಿರುತ್ತದೆ.
ಕಳೆದ ಒಂಬತ್ತು ತಿಂಗಳಿಂದ ಪಟೇಲ್ ಸಮುದಾಯದಿಂದ ಮೀಸಲಾತಿಗಾಗಿ ಪ್ರತಿಭಟನೆ ನಡೆಯುತ್ತಿದ್ದು, ಪ್ರಸಕ್ತ ಈ ಮೀಸಲಾತಿಯಿಂದ ಎಲ್ಲಾ ಸಮುದಾಯಗಳಿಗೆ ಲಾಭವಾಗಲಿದೆ ಎನ್ನಲಾಗಿದೆ.
ಈ ಮೀಸಲಾತಿ ಪ್ರಕಾರ ಪಟೇಲ್, ಬ್ರಾಹ್ಮಣ, ಕ್ಷತ್ರಿಯ ಮತ್ತು ಲೋಹನ ಸಮುದಾಯಗಳಿಗೆ 6 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ವರಮಾನವಿರುವ ಜನರು ಈ ಮೀಸಲಾತಿ ಪಡೆಯುವಲ್ಲಿ ಅರ್ಹರಾಗಿದ್ದು, ಇದನ್ನು ಗುಜರಾತ್ ರಾಜ್ಯ ಸ್ಥಾಪನಾ ದಿನವಾದ ಮೇ 1 ರಂದು ಘೋಷಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.