ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಅವರುಗಳನ್ನು ಉಗ್ರರೆಂದು ಪಠ್ಯಪುಸ್ತಕದಲ್ಲಿ ಉಲ್ಲೇಖಿಸಿರುವ ದೆಹಲಿ ವಿಶ್ವವಿದ್ಯಾಲಯಕ್ಕೆ ಮಾನವ ಸಂಪನ್ಮೂಲ ಸಚಿವಾಲಯ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಈ ಬಗ್ಗೆ ವಿಶ್ವವಿದ್ಯಾಲಯಕ್ಕೆ ಸಚಿವಾಲಯ ಪತ್ರ ಬರೆದಿದ್ದು, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಉಲ್ಲೇಖಿಸುವಾಗ ’ಭಯೋತ್ಪಾದಕರು’ ಎಂಬ ಶಬ್ದವನ್ನು ಬಳಕೆ ಮಾಡಬೇಡಿ, ಇದರಿಂದ ರಾಷ್ಟ್ರೀಯ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಕಿವಿಮಾತು ಹೇಳಿದೆ.
ಇಂದು ಭಯೋತ್ಪಾದಕ ಶಬ್ದಕ್ಕೆ ಭಿನ್ನ ಅರ್ಥವಿದೆ, ಹಾಗಾಗೀ ಸ್ವಾತಂತ್ರ್ಯ ಸೇನಾನಿಗಳ ಉಲ್ಲೇಖವನ್ನು ಜಾಗರೂಕರಾಗಿ ಮಾಡಬೇಕು ಎಂದಿದೆ.
ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್ ಪಠ್ಯದಲ್ಲಿ ಭಗತ್, ಆಜಾದ್ರನ್ನು ಕ್ರಾಂತಿಕಾರಿ ಭಯೋತ್ಪಾದಕರು ಎಂದು ಕರೆಯಲಾಗಿತ್ತು, ಇದಕ್ಕೆ ತೀವ್ರ ಆಕ್ಷೇಪಗಳು ಕೇಳಿ ಬಂದಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.