ನವದೆಹಲಿ: ಕೊನೆಗೂ ಪಾಕಿಸ್ಥಾನ ಭಾರತದ ಒತ್ತಡಕ್ಕೆ ಮಣಿದಂತೆ ಕಾಣುತ್ತಿದೆ. ಪ್ರತಿ ಭಾರೀ ಭಾರತ ಸರ್ಕಾರದೊಂದಿಗೆ ಮಾತುಕತೆಗೆ ಆಗಮಿಸುವ ಪಾಕಿಸ್ಥಾನ ತಂಡ ಕಾಶ್ಮೀರದ ಪ್ರತ್ಯೇಕತಾವಾದಿಗಳೊಂದಿಗೆ ಸಮಾಲೋಚನೆ ನಡೆಸಿಯೇ ತೆರಳುತ್ತಿತ್ತು. ಇದೇ ಕಾರಣದಿಂದ ಹಲವಾರು ಭಾರೀ ಮಾತುಕತೆಗಳು ಮುರಿದು ಬಿದ್ದಿವೆ.
ಆದರೆ ಈ ಬಾರಿ ಮಾತುಕತೆಗೆ ಆಗಮಿಸಿರುವ ಪಾಕಿಸ್ಥಾನದ ವಿದೇಶಾಂಗ ಕಾರ್ಯದರ್ಶಿಯವರನ್ನೊಳಗೊಂಡ ನಿಯೋಗ ಹುರಿಯತ್ ನಾಯಕರನ್ನು ಮಾತುಕತೆಗೆ ಆಹ್ವಾನಿಸದೆಯೇ ಸ್ವದೇಶಕ್ಕೆ ಮರಳಿದೆ.
20 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಹುರಿಯತ್ ನಾಯಕರನ್ನು ಭೇಟಿಯಾಗದೆ ಪಾಕಿಸ್ಥಾನಿಯರು ತೆರಳಿದ್ದಾರೆ. ಪಾಕಿಸ್ಥಾನದ ಈ ನಡೆ ಮೋದಿ ಸರ್ಕಾರಕ್ಕೆ ಸಿಕ್ಕ ಮುನ್ನಡೆ ಎಂದೇ ಹೇಳಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.