ನವದೆಹಲಿ: ಕೊನೆಗೂ ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತಿರುವ ಟೆನ್ನಿಸ್ ತಾರೆಯರಾದ ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ರಿಯೋ ಒಲಿಂಪಿಕ್ಸ್ನಲ್ಲಿ ಒಟ್ಟಾಗಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಇತ್ತೀಚಿಗೆ ಪರಸ್ಪರ ಭೇಟಿಯಾಗಿ ಮಾತುಕತೆಯ ಮೂಲಕ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡಿರುವ ಈ ಜೋಡಿ ರಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಟೆನ್ನಿಸ್ ಡಬಲ್ಸ್ ವಿಭಾಗದಲ್ಲಿ ಜಂಟಿಯಾಗಿ ಭಾರತದ ಪರ ಆಡಲಿದ್ದಾರೆ.
ಪೇಸ್ ಮತ್ತು ಭುಪತಿ ಜೋಡಿ ಒಂದು ಕಾಲದಲ್ಲಿ ಅತ್ಯಂತ ಯಶಸ್ವಿ ಜೋಡಿ ಎನಿಸಿಕೊಂಡಿತ್ತು, ಆದರೆ ಬಳಿಕ ಕಾಣಿಸಿಕೊಂಡ ವೈಮನಸ್ಸಿನಿಂದಾಗಿ ಈ ಜೋಡಿ ಜಂಟಿಯಾಗಿ ಕಣಕ್ಕಿಳಿಯುವುದನ್ನೇ ಬಿಟ್ಟು ಬಿಟ್ಟಿತ್ತು. ಇದೀಗ ಸುದೀರ್ಘ ಸಮಯದ ಬಳಿಕ ಮತ್ತೆ ಇವರು ಒಂದಾಗಿರುವುದು ಭಾರತೀಯರಿಗೆ ಸಂತಸ ತಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.