ಬೀಜಿಂಗ್: ಭಾರತದಲ್ಲಿ ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳಿಗೆ ಉಚಿತ ವೈಫೈ ನೀಡುವ ಯೋಜನೆಗೆ ಸರ್ಕಾರ ಮುಂದಾದರೆ ಚೀನಾ ಬೀಜಿಂಗ್ನ ಸಾರ್ವಜನಿಕ ಶೌಚಾಲಯಗಳಿಗೆ ಉಚಿತ ವೈಫೈ ನೀಡಲು ಮುಂದಾಗಿದೆ.
ಬೀಜಿಂಗ್ ನಗರಪಾಲಿಕೆಯು ’ಟಾಯ್ಲೆಟ್ ರೆವೋಲ್ಯೂಶನ್’ ಭಾಗವಾಗಿ 100 ಶೌಚಾಲಯಗಳನ್ನು ನಿರ್ಮಿಸುತ್ತಿದ್ದು, ಇದಕ್ಕೆ ಉಚಿತ ವೈಫೈ ಸೇವೆ ನೀಡಲು ಚಿಂತನೆ ನಡೆಸಿದೆ. ಟಾಂಗ್ಝು ಮತ್ತು ಫಂಗ್ಷನ್ ಜಿಲ್ಲೆಗಳಲ್ಲಿ ಈ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದ್ದು, ವೈಫೈ ಅಲ್ಲದೇ ಎಟಿಎಂ ಯಂತ್ರ, ಮೋಬೈಲ್ ಫೋನ್ಗಳು ಹಾಗೂ ವಿದ್ಯುತ್ ಚಾಲಿತ ವಾಹನಗಳನ್ನು ಚಾರ್ಜ್ ಮಾಡುವ ವ್ಯವಸ್ಥೆ ಇರಲಿದೆ ಎಂದು ಬೀಜಿಂಗ್ ನಗರಪಾಲಿಕೆ ಆಯೋಗದ ಆಡಳಿತ ಮತ್ತು ಪರಿಸರ ಅಧಿಕಾರಿ ಜಿ ಯಾಂಗ್ ತಿಳಿಸಿದ್ದಾರೆ.
ಮಕ್ಕಳ ತಾಯಂದಿರಿಗೆ ಸುಲಭವಾಗುವಂತೆ ’ಬೇಬಿ ಸೀಟ್’ಗಳ ವ್ಯವಸ್ಥೆಯನ್ನು ಶೌಚಾಲಯದ ಸಮೀಪ ಮಾಡಲಾಗುವುದು ಎಂದು ಜಿ ಯಾಂಗ್ ಹೇಳಿದ್ದಾರೆ.
ಪ್ರತಿ ಶೌಚಾಲಯ ನಿರ್ಮಾಣದ ವೆಚ್ಚ ಸುಮಾರು 50,000 ಯಾನ್ (7,685 ಡಾಲರ್)ನಿಂದ 1,00,000 ಯಾನ್ ಆಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಇರುವ ಶೌಚಾಲಯಗಳಿಗೆ ವಾತಾಯನ (ventilation), ಚಳಿಗಾಲದಲ್ಲಿ 12 ಡಿಗ್ರಿ ತಾಪಮಾನ ಮತ್ತು ಬೇಸಿಗೆಯಲ್ಲಿ 30 ಡಿಗ್ರಿ ತಾಪಮಾನ ಕಾಯ್ದುಕೊಳ್ಳಲು ಹವಾನಿಯಂತ್ರಣ ವ್ಯವಸ್ಥೆ ಮಾಡಲಾಗುವುದು ಎಂದು ಜಿ ಯಾಂಗ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.