News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿಯನ್ನು ಭೇಟಿಯಾದ ಟ್ವಿಟರ್ ಸಿಇಓ

twitterನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನವದೆಹಲಿಯಲ್ಲಿ ಟ್ವಿಟರ್ ಸಿಇಓ ಡಿಕ್ ಕೊಸ್ಟೋಲೊ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಸ್ವಚ್ಛ ಭಾರತ, ಬೇಟಿ ಬಚಾವೋ ಬೇಟಿ ಪಡಾವೋ ಮುಂತಾದ ಅಭಿಯಾನಗಳು ಯಶಸ್ಸು ಪಡೆಯಲು ಟ್ವಿಟರ್ ಉತ್ತಮ ವೇದಿಕೆ ಕಲ್ಪಿಸುವುದು ಮಾತ್ರವಲ್ಲದೇ, ಪ್ರಚಾರ ಕಾರ್ಯಕ್ಕೂ ಅದು ಬೆಂಬಲ ನೀಡಬಹುದು ಎಂದು ಮೋದಿ ಅಭಿಪ್ರಾಯಪಟ್ಟರು.

ಅಲ್ಲದೇ ಭಾರತದ ಶ್ರೀಮಂತ ಪ್ರವಾಸೋದ್ಯಮವನ್ನು ವಿಶ್ವದಾದ್ಯಂತ ಪ್ರಚಾರ ಮಾಡುವಂತೆ ಅವರು ಸಿಇಓವನ್ನು ಕೇಳಿಕೊಂಡರು. ಅಂತಾರಾಷ್ಟ್ರೀಯ ಯೋಗದಿನದ ಬಗ್ಗೆ ಮಾತನಾಡಿದ ಅವರು ಇದನ್ನು ಮತ್ತಷ್ಟು ಜನಪ್ರಿಯಗೊಳಿಸುವಂತೆ ಮನವಿ ಮಾಡಿದರು. ಭಾರತದ ಭಾಷಾ ವೈವಿಧ್ಯತೆಗೆ ಅನುಗುಣವಾಗಿ ಸೇವೆಗಳನ್ನು ನೀಡುವಂತೆ ಅವರು ಒತ್ತಾಯಿಸಿದರು.

ಭಾರತದಲ್ಲಿ ಟ್ವಿಟರ್ ಜನಪ್ರಿಯಗೊಳ್ಳುತ್ತಿರುವುದಕ್ಕೆ ಕೊಸ್ಟೋಲೊ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಭಾರತದ ಯುವಕರ ಹೊಸತನವನ್ನು, ಸೃಜನಶೀಲತೆಯನ್ನು ಕಾಣಲು ಇಲ್ಲಿಗೆ ಬಂದಿದ್ದೇನೆ. ಟ್ವಿಟರ್ ಪ್ರಗತಿಗೆ ಇಲ್ಲಿನ ಯುವಕರು ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.

Tags: ,

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top