Tuesday, April 26th, 2016
News13
ನವದೆಹಲಿ: ದೆಹಲಿಯಲ್ಲಿ ಎರಡನೇ ಹಂತದ ಸಮ-ಬೆಸ ನಿಯಮ ಜಾರಿಯಾಗಿದ್ದು, ಈ ಸಂದರ್ಭ ಸಂಸತ್ ಸದಸ್ಯರನ್ನು ಕರೆದೊಯ್ಯಲು ದೆಹಲಿಯ ಎಎಪಿ ಸರ್ಕಾರ ಹವಾನಿಯಂತ್ರಿತ ಬಸ್ಗಳನ್ನು ನಿಯೋಜಿಸಿದೆ.
ಆದರೆ ಈ ಸೇವೆ ಆರಂಭಗೊಂಡ ಮೊದಲ ದಿನ ಕೇವಲ 5 ಮಂದಿ ಸದಸ್ಯರು ಮಾತ್ರ ಈ ಬಸ್ನಲ್ಲಿ ಪ್ರಯಾಣಿಸಿದ್ದು, ಸಂಸತ್ ಸದಸ್ಯರ ನೀರಸ ಪ್ರತಿಕ್ರಿಯೆಯಿಂದಾಗಿ ಎಎಪಿ ಸರ್ಕಾರ 4 ಬಸ್ಗಳನ್ನು ರದ್ದುಗೊಳಿಸಿದೆ.
ಸಂಸತ್ ಸದಸ್ಯರು ಸಮ-ಬೆಸ ನಿಯಮ ಪಾಲಿಸುವಂತೆ ದೆಹಲಿ ಸರ್ಕಾರ ಮನವಿ ಮಾಡಿದ್ದು, ಸೋಮವಾರ ಆರಂಭಗೊಂಡ ಸಂಸತ್ ಅಧಿವೇಶನದ ಸಂದರ್ಭ ಸದಸ್ಯರನ್ನು ಕರೆದೊಯ್ಯಲು 6 ಡಿಟಿಸಿ ಹವಾನಿಯಂತ್ರಿತ ಬಸ್ಗಳನ್ನು ಆರಂಭಿಸಲಾಗಿತ್ತು. ಆದರೆ ಸಂಸತ್ ಸದಸ್ಯರ ನೀರಸ ಪ್ರತಿಕ್ರಿಯೆಯಿಂದಾಗಿ ದೆಹಲಿ ಸರ್ಕಾರ 4 ಬಸ್ಗಳನ್ನು ರದ್ದುಗೊಳಿಸಿದೆ.
ಈ ‘ಎಂಪಿ ಸ್ಪೆಷಲ್’ ಬಸ್ಗಳು ಬೆಳಗ್ಗೆ 9 ರಿಂದ 11 ಹಾಗೂ ಸಂಜೆ 5.30 ರಿಂದ 8 ಗಂಟೆ ವರೆಗೆ ಸಂಚಾರ ನಡೆಸುತ್ತಿದ್ದವು.