Saturday, April 23rd, 2016
Admin
ನವದೆಹಲಿ: ನಮ್ಮ ದೇಶದಲ್ಲಿ ನೀರಿಗಾಗಿ ಹಾಹಾಕಾರ ದಿನೇ ದಿನೇ ಹೆಚ್ಚುತ್ತಿದೆ, ಬರಿದಾಗುತ್ತಾ ಸಾಗುತ್ತಿರುವ ನೀರಿನ ಮೂಲ ಜನಜೀವನವನ್ನು ದುಸ್ಥರಗೊಳಿಸುತ್ತಾ ಸಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಇನ್ನು 30 ವರ್ಷದಲ್ಲಿ ನಾವು ನೀರನ್ನು ಇತರ ದೇಶದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ.
ದಾಖಲೆಯ ಪ್ರಕಾರ 2001ರಿಂದ ಪ್ರತಿದಿನ ದೇಶದ ಅಂತರ್ಜಲ ಲಭ್ಯತೆ ದಿನಕ್ಕೆ 5,120 ಲೀಟರ್ನಷ್ಟು ಕುಂಠಿತವಾಗುತ್ತಿದೆ. 2025ರ ವೇಳೆಗೆ ಶೇ.22ರಷ್ಟು ಗ್ರೌಂಡ್ ವಾಟರ್ ಕುಸಿತವಾಗಲಿದೆ ಎಂದು ಸೆಂಟ್ರಲ್ ಗ್ರೌಂಡ್ ವಾಟರ್ ಬೋರ್ಡ್ ವರದಿ ತಿಳಿಸಿದೆ.
ಮಳೆ ನೀರು ಕೊಳ, ಸಾಗರ, ಸರೋವರ, ಕೆರೆ, ಬಾವಿಗಳಲ್ಲಿ ನೆಲೆ ನಿಲ್ಲದೇ ಇರುವುದೇ ಅಂತರ್ಜಲ ಕುಸಿಯಲು ಪ್ರಮುಖ ಕಾರಣವಾಗುತ್ತಿದೆ.
ಏರುತ್ತಿರುವ ಜನಸಂಖ್ಯೆ , ಅದರ ನೀರಿನ ಬೇಡಿಕೆಯನ್ನು ಈಡೇರಿಸಬೇಕಾದರೆ ಅಂತರ್ಜಲ ಬತ್ತದಂತೆ ನಾವು ಕಾಪಾಡಬೇಕಾಗಿದೆ, ಇಲ್ಲವಾದರೆ 30 ವರ್ಷದಲ್ಲಿ ನೀರು ಆಮದು ಮಾಡಿಕೊಳ್ಳುವ ಸ್ಥಿತಿ ನಾವು ತಲುಪುವುದು ಖಚಿತ.