Thursday, April 21st, 2016
News13
ತಿರುವನಂತಪುರಂ: ಸಿಯಾಚಿನ್ ಪ್ರದೇಶದ ಅತಿ ಕಠೋರ ಚಳಿಯ ಸಂದರ್ಭ ಸೈನಿಕರು ತಮ್ಮ ದೇಹದ ಉಷ್ಣತೆ ಕಾಪಾಡುವಂತಹ ಉಪಕರಣವನ್ನು ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ತಯಾರಿಸಿದೆ.
ಸಿಲಿಕಾ ಏರೋಜೆಲ್ ಅಥವಾ ಬ್ಲ್ಯೂ ಏರ್ ಎಂಬ ಅತೀ ಹಗುರವಾದ ಈ ವಸ್ತು ಭೂಮಿ ಹಾಗೂ ಬಾಹ್ಯಾಕಾಶದಲ್ಲಿ ಬಳಸಬಹುದಾಗಿದ್ದು, ಸೈನಿಕರ ಸಮವಸ್ತ್ರದಲ್ಲಿ ಇರಿಸಲಾಗುತ್ತದೆ. ಉಷ್ಣವನ್ನು ಕಾಪಾಡಬಲ್ಲ ಈ ವಸ್ತು, ದೇಹವನ್ನು ಬೆಚ್ಚಗಿಡಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.
ಫ್ರೋಜನ್ ಸ್ಮೋಕ್ ಎಂದೂ ಕರೆಯಲಾಗುವ ಈ ವಸ್ತು ಒಂದು ಹೂವಿನ ಮೇಲೆ ಇರಿಸಲು ಸಧ್ಯವಾಗಿವಷ್ಟು ಹಗುರವಾಗಿದೆ. ಇದನ್ನು ರಾಕೆಟ್ ಇಂಜಿನ್ಗಳ ಇನ್ಸುಲೇಷನ್ಗಳಾಗಿ ಬಳಸಬಹುದಾಗಿದೆ.
ಇದನ್ನು ಸೈನಿಕರ ಉಷ್ಣ ಜ್ಯಾಕೆಟ್ಗಳಲ್ಲಿ, ವಿಂಡೋ ಗ್ಲೇಝಿಂಗ್ಗಾಗಿ ಕೂಡ ಬಳಸಬಹುದಾಗಿದೆ ಎಂದು ತಿಳಿದು ಬಂದಿದೆ.