Thursday, April 21st, 2016
Admin
ನವದೆಹಲಿ: ವಿಶ್ವ ಆರೊಗ್ಯ ಸಂಸ್ಥೆ ಬುಧವಾರ ಯುರೋಪ್ನ್ನು ಮಲೇರಿಯಾ ಮುಕ್ತ ಪ್ರದೇಶ ಎಂದು ಘೋಷಿಸಿದೆ.
ಕಳೆದ ವರ್ಷದಿಂದ ಇಲ್ಲಿ ಒಂದೇ ಒಂದು ಮಲೇರಿಯಾ ಪ್ರಕರಣಗಳು ದಾಖಲಾಗಿಲ್ಲ, ಹೀಗಾಗಿ ಇದು ವಿಶ್ವ ಮೊದಲ ಮಲೇರಿಯಾ ಮುಕ್ತ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 1995ರಲ್ಲಿ 90,712 ಇಲ್ಲಿ ಇದ್ದ ದೇಶೀಯ ಮಲೇರಿಯಾ ಪ್ರಕರಣಗಳು 2015ರ ವೇಳೆ ಶೂನ್ಯಕ್ಕೆ ಇಳಿದಿದೆ.
ಯುರೋಪ್ ಪ್ರದೇಶದ 53 ದೇಶಗಳನ್ನು ಒಳಗೊಂಡಿದ್ದು, ಒಟ್ಟು 900 ಮಿಲಿಯನ್ ಜನಸಂಖ್ಯೆ ಇದೆ. ರಷ್ಯಾ, ಸೋವಿಯತ್ ರಿಪಬ್ಲಿಕ್ಗಳೂ ಇದರಲ್ಲಿ ಸೇರಿವೆ.