Tuesday, April 19th, 2016
News13
ಬೆಂಗಳೂರು: ಗಾರ್ಮೆಂಟ್ಸ್ ಕಾರ್ಮಿಕರು ಕೇಂದ್ರ ಸರ್ಕಾರದ ನೂತನ ಕಾರ್ಮಿಕ ನೀತಿ ಖಂಡಿಸಿ ನಡೆಸುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ.
ಪ್ರತಿಭಟನೆ ನಿರತರು ಕಲ್ಲುಗಳಿಂದ ಎಸೆಯುತ್ತಿದ್ದು ಅನೇಕ ಮಹಿಳೆಯರು, ಬಿಎಂಟಿಸಿಯ 5 ಬಸ್ಸುಗಳನ್ನು ಮತ್ತು ಪೊಲೀಸ್ ಜೀಪುಗಳನ್ನು ಜಖಂ ಗೊಳಿಸಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರುವಾಯು ಸಿಡಿಸಿದ್ದಾರೆ. ಅಲ್ಲದೇ ಗಾಳಿಯಲ್ಲಿ 15 ಸುತ್ತಿನ ಗುಂಡನ್ನು ಹಾರಿಸಲಾಗಿದೆ.
ಪ್ರತಿಭಟನಾಕಾರರಿಂದ ದಾಸರಹಳ್ಳಿ, ಹೊಸೂರು, ಪೀಣ್ಯ, ಜಾಲಹಳ್ಳಿ ಮತ್ತು ಬೆಂಗಳೂರನ್ನು ಸಂಪರ್ಕಿಸುವ ಹೆದ್ದಾರಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಘಟನೆಯಿಂದಾಗಿ ಈರ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳಿಂದ ತಿಳಿಂದು ಬಂದಿದೆ.
ಎಲ್ಲೆಡೆ ಟ್ರಾಫಿಕ್ ಜಾಮ್ ಆಗಿದ್ದು, ಜನರು ಪರದಾಡುವಂತಾಗಿದೆ.