ಮಂತ: ಇಕ್ವೇಡರ್ನಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ಸುಮಾರು 233 ಮಂದಿ ಹತರಾಗಿದ್ದಾರೆ. ಮೊದಲು ಇಲ್ಲಿ ನೆರೆ ಸಂಭವಿಸಿತ್ತು ಆದಾದ ಬಳಿಕ ಏಕಾಏಕಿ ಭೂಮಿ ಕಂಪಿಸಿ ದೊಡ್ಡ ಅನಾಹುತವೇ ಇಲ್ಲಿ ನಡೆದು ಹೋಗಿದೆ.
ಇಲ್ಲಿನ ಕರಾವಳಿ ಪ್ರದೇಶದಲ್ಲಿ ಅಪಾಯದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದು, 13,500 ರಕ್ಷಣಾ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಇಕ್ವೇಡರ್ಗೆ ದಶಕಗಳಲ್ಲಿ ಅಪ್ಪಳಿಸಿದ ಅತೀದೊಡ್ಡ ಭೂಕಂಪ ಇದಾಗಿದೆ.
ಪಿಸಿಫಿಕ್ ಕರಾವಳಿ ಪ್ರದೇಶದಲ್ಲಿ ಶನಿವಾರ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು, ಇದರ ಅನುಭವ 16 ಮಿಲಿಯನ್ ಜನಸಂಖ್ಯೆ ಹೊಂದಿರುವ ಅಂಡೀಯನ್ ರಾಷ್ಟ್ರಕ್ಕೂ ಆಗಿತ್ತು. ಕಟ್ಟಡಗಳು ಮಗುಚಿ ಬಿದ್ದವು, ರಸ್ತೆಗಳು ಇಬ್ಭಾಗಗೊಂಡವು. ಜನ ಆತಂಕದಿಮದ ದಿಕ್ಕಾಪಾಲಾಗಿ ಓಡಿದ್ದಾರೆ.
ಅಧ್ಯಕ್ಷ ರಫೆಲ್ ಕೊರ್ರೆಯ ಇಟಲಿ ಪ್ರವಾಸವನ್ನು ರದ್ದುಗೊಳಿಸಿ ವಾಪಾಸ್ಸಾಗಿದ್ದು, ಭಾನುವಾರ ಸಾವಿನ ಸಂಕ್ಯೆ 233ಕ್ಕೆ ಏರಿದೆ, 1,500 ಮಂದಿ ಗಾಯಗೊಂಡಿದ್ದಾರೆ ಎಂದು ಘೋಷಿಸಿದ್ದಾರೆ. ಆರು ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.