Friday, April 15th, 2016
Admin
ನವದೆಹಲಿ: ಭವಿಷ್ಯದಲ್ಲಿ ರಾಜಕೀಯ ಸೇರುವ ಇಚ್ಛೆಯಾದರೆ ಖಂಡಿತಾ ಸೇರುತ್ತೇನೆ ಎಂದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ, ನನಗೆ ನನ್ನ ಬದುಕು ರೂಪಿಸಲು ಪ್ರಿಯಾಂಕ ಗಾಂಧಿಯವರ ಯಾವ ಅಗತ್ಯತೆಯೂ ಇಲ್ಲ ಎಂದಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, ಜನರಿಗಾಗಿ ಕೆಲಸ ಮಾಡಬೇಕು ಎಂದು ಯಾವಾಗ ನನಗನಿಸುತ್ತದೋ, ಆ ಬಗ್ಗೆ ಕರೆ ಬಂದಾಗ ನಾನು ರಾಜಕೀಯ ಸೇರುವ ಬಗ್ಗೆ ಯೋಚಿಸುತ್ತೇನೆ, ಭವಿಷ್ಯದಲ್ಲಿ ನನಗಾಗಿ ಏನು ಇದೆ ಎಂಬುದನ್ನು ಕಾದು ನೋಡಬೇಕಷ್ಟೇ ಎಂದಿದ್ದಾರೆ.
’ನನಗೆ ನನ್ನ ಬದುಕು ಕಟ್ಟಿಕೊಳ್ಳಲು ಪತ್ನಿ ಪ್ರಿಯಾಂಕರ ಅಗತ್ಯವಿಲ್ಲ, ನನಗೆ ಬೇಕಾದಷ್ಟಿದೆ, ನನ್ನ ತಂದೆ ನನಗೆ ಬೇಕಾದಷ್ಟನ್ನು ನೀಡಿದ್ದಾರೆ, ಎಲ್ಲಾ ಪರಿಸ್ಥಿತಿಯನ್ನು ಎದುರಿಸಲು ಸಾಕಷ್ಟು ಶಿಕ್ಷಣವನ್ನೂ ಪಡೆದುಕೊಂಡಿದ್ದೇನೆ’ ಎಂದಿದ್ದಾರೆ.
ಹಲವಾರು ಹಗರಣಗಳಲ್ಲಿ ವಾದ್ರ ಹೆಸರು ಕೇಳಿ ಬಂದಿದ್ದು, ಗಾಂಧಿ ಕುಟುಂಬದ ಶ್ರೀರಕ್ಷೆಯಿಂದ ಇವರು ಬಚಾವ್ ಆಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.