×
Home About Us Advertise With s Contact Us

ಅಮರಾವತಿ ಆಂಧ್ರಪ್ರದೇಶದ ರಾಜಧಾನಿ?

amaravathi1ಹೈದರಾಬಾದ್: ಗುಂಟೂರು ಜಿಲ್ಲೆಯಲ್ಲಿ  ನಿರ್ಮಾಣವಾಗಲಿರುವ ಆಂಧ್ರಪ್ರದೇಶದ ನೂತನ ರಾಜಧಾನಿಗೆ ‘ಅಮರಾವತಿ’ ಎಂದು ಹೆಸರಿಡಲು ಆಂಧ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

ರಾಜಧಾನಿ ನಿರ್ಮಿಸಲು ಆಂಧ್ರಪ್ರದೇಶ ಸರ್ಕಾರ ತುಳ್ಳೂರು ಮತ್ತು ಉಂಡವಳ್ಳಿ ಮಂಡಲದ 29 ಗ್ರಾಮಗಳ 33,೦೦೦ ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಸಿಂಗಪುರ ಸರ್ಕಾರ ನೂತನ ರಾಜಧಾನಿಯ ವಿನ್ಯಾಸ ಒದಗಿಸಲಿದೆ. ಅಂದಾಜು 27,೦೦೦ ಕೋಟಿ ವೆಚ್ಚದಲ್ಲಿ ಜಪಾನ್ ಕಂಪೆನಿಗಳು ಕಟ್ಟಡ ನಿರ್ಮಾಣ ಜವಾಬ್ದಾರಿ ವಹಿಸಿಕೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ.

ಅಮರಾವತಿ ಪಟ್ಟಣ ಕೃಷ್ಣಾ ನದಿ ದಡದಲ್ಲಿದೆ. ಗುಂಟೂರು ಪಟ್ಟಣದಿಂದ 35 ಕಿಲೋ ಮೀಟರ್ ಮತ್ತು ವಿಜಯವಾಡದಿಂದ 40 ಕಿಲೋ ಮೀಟರ್ ದೂರದಲ್ಲಿರುವ ಈ ಐತಿಹಾಸಿಕ ಪಟ್ಟಣದಲ್ಲಿ ಅಮರೇಶ್ವರ ದೇವಾಲಯವಿದೆ. ಕೃಷ್ಣಾ ನದಿ ದಡದಲ್ಲಿರುವ ಅಮರಾವತಿ ಸಣ್ಣ  ಪಟ್ಟಣ. ಇಲ್ಲಿ ಶಾತವಾಹನರು ಆಳ್ವಿಕೆ ನಡೆಸಿದ್ದರು.

ಜೂನ್‌ನಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಮರಾವತಿಯನ್ನು ರಾಜಧಾನಿಯಾಗಿ ಘೋಷಿಸಲಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top