Thursday, April 14th, 2016
Admin
ನವದೆಹಲಿ: ಡಾ.ಬಿ.ಆರ್ ಅಂಬೇಡ್ಕರ್ ಅವರ 125ನೇ ಜನ್ಮ ದಿನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದು, ಬಡವರ ಮತ್ತು ದೀನ ದಲಿತರ ಕಲ್ಯಾಣಕ್ಕಾಗಿ ಜೀವನ ಮುಡುಪಾಗಿಟ್ಟ ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಿಶ್ವ ಮಾನವ ಎಂದು ಬಣ್ಣಿಸಿದ್ದಾರೆ.
’ಅಂಬೇಡ್ಕರ್ ಶಿಕ್ಷಣದ ಶಕ್ತಿಯ ಮೇಲೆ ನಂಬಿಕೆಯಿಟ್ಟಿದ್ದರು, ರೈತರ ಮತ್ತು ಕಾರ್ಮಿಕರ ಅಭಿವೃದ್ಧಿಯನ್ನೊಳಗೊಂಡ ಅವರ ಆರ್ಥಿಕ ದೃಷ್ಟಿಕೋನ ಅಭೂತಪೂರ್ವವಾದುದು’ ಎಂದಿದ್ದಾರೆ.
ಸಂಸತ್ತಿನ ಆವರಣದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಗಣ್ಯರು, ರಾಜಕಾರಣಿಗಳು ಮಹಾನ್ ದಲಿತ ನಾಯಕನಿಗೆ ಗೌರವ ನಮನಗಳನ್ನು ಸಲ್ಲಿಸಿದರು.
ಮಹಾರಾಷ್ಟ್ರದದ ಮೇಹವ್ನಲ್ಲಿ ಇಂದು ನಡೆಯಲಿರುವ ’ಅಂಬೇಡ್ಕರ್ ಮಹಾಕುಂಭ’ ದಲ್ಲಿ ಮೋದಿ ಭಾಗವಹಿಸಲಿದ್ದಾರೆ.