Monday, April 11th, 2016
Admin
ತಿರುವನಂತಪುರಂ: ಕೇರಳದ ಕೊಲ್ಲಂನ ಪುಟ್ಟಿಂಗಲ್ ದೇಗುಲದಲ್ಲಿ ನಡೆದ ಪಟಾಕಿ ದುರಂತಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಆಧ್ಯಾತ್ಮ ಗುರು ಶ್ರೀ ಮಾತಾ ಅಮೃತಾನಂದಮಯೀ ಅವರು, ಪಟಾಕಿಯನ್ನು ನಿಷೇಧಿಸುವಂತೆ ಕರೆ ನೀಡಿದ್ದಾರೆ.
‘ಇಂತಹ ಘಟನೆಗಳು ಪ್ರತಿ ವರ್ಷ ನಡೆಯುತ್ತಿದೆ, ನೂರಾರು ಜನ ಸಾಯುತ್ತಿದ್ದಾರೆ. ಇದು ಗಂಭೀರವಾಗಿ ಚಿಂತಿಸಬೇಕಾದ ಸಮಯ. ಪಟಾಕಿಗಳನ್ನು ಜನರ ಸಂತೋಷಕ್ಕಾಗಿ ಸುಡಲಾಗುತ್ತದೆಯೇ ಹೊರತು ದೇವರಿಗಾಗಿ ಅಲ್ಲ, ದೇವರು ಕಿವುಡನಲ್ಲ. ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕಿದೆಯೇ ಹೊರತು ಕೇವಲ ನಾಮಕವಸ್ತೆಗೆ ಅಲ್ಲ’ ಎಂದಿದ್ದಾರೆ.
ಕೊಲ್ಲಂನಲ್ಲಿ ನಡೆದ ಅಗ್ನಿ ದುರಂತದಲ್ಲಿ 110 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.