×
Home About Us Advertise With s Contact Us

ಐಪಿಎಲ್ ಪಂದ್ಯಗಳನ್ನು ಸ್ಥಳಾಂತರಿಸಲು ಪಿಐಎಲ್

 

high

ಬೆಂಗಳೂರು : ಐಪಿಎಲ್ ಪಂದ್ಯಗಳನ್ನು ಬೆಂಗಳೂರಿನಿಂದ  ಸ್ಥಳಾಂತರಿಸಲು ಆದೇಶಿಸುವಂತೆ ಕೋರಿ  ಹೈಕೋರ್ಟ್ ನಲ್ಲಿ ಅರ್ಜಿ ದಾಖಲಿಸಲಾಗಿದೆ.

ಪ್ರಸ್ತುತ ರಾಜ್ಯವು ಬರ ಪೀಡಿತವಾಗಿದ್ದು ಇಲ್ಲಿ ಐಪಿಎಲ್ ಪಂದ್ಯಗಳನ್ನು ಸ್ಥಳಾಂತರಿಸಲು  ಬಿಸಿಸಿಐಗೆ ಆದೇಶಿಸುವಂತೆ ಕೋರಿ ಅರ್ಜಿಸಲ್ಲಿಸಲಾಗಿದೆ ಆದರೆ ಹೈಕೋರ್ಟ್ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಷಾ ಅವರನ್ನು ಪ್ರತಿವಾದಿಯನ್ನಾಗಿ ಪಿಐಎಲ್ ಅರ್ಜಿ ದಾಖಲಿಸಬೇಕಾಗಿ ಹೈಕೋರ್ಟ್ ಅರ್ಜಿದಾರ ದಿವಾಕರ್ ಗೆ ಸೂಚಿಸಿದೆ. ಆಗ ಅರ್ಜಿ ವಿಚಾರಣೆಯನ್ನು ನಡೆಸಲಾಗುವುದು ಎಂದು ಹೇಳಿದೆ.

ಇತ್ತೀಚಿಗಷ್ಟೆ ಐಪಿಎಲ್ ಪಂದ್ಯಗಳಲ್ಲಿ ಕೇವಲ ಪಿಚ್‌ಗಾಗಿ 60 ಲಕ್ಷ ಲೀಟರ್ ನೀರನ್ನು ವ್ಯಯ ಮಾಡಲಾಗುತ್ತದೆ, ಹೀಗಾಗಿ ತೀವ್ರ ಬರಗಾಲದಿಂದ ತತ್ತರಿಸಿರುವ ಮುಂಬಯಿಯಿಂದ ಪಂದ್ಯಗಳನ್ನು ಶಿಫ್ಟ್ ಮಾಡಬೇಕು ಎಂದು ಕೋರಿ ಎನ್‌ಜಿಓವೊಂದು ಪಿಟಿಷನ್ ಹಾಕಿತ್ತು. ಐಪಿಎಲ್ ಪಂದ್ಯಗಳನ್ನು ನೀರಿನ ಕೊರತೆಯಿಲ್ಲದ ರಾಜ್ಯಗಳಿಗೆ ಸ್ಥಳಾಂತರ ಮಾಡುವ ಸಲಹೆಯನ್ನು ಹೈಕೋರ್ಟ್ ನೀಡಿತ್ತು. ಅಲ್ಲದೇ ಹಣ ಕೊಟ್ಟು ನೀರು ಖರೀದಿಸಿ ಆದರೆ ಕುಡಿಯುವ ನೀರನ್ನು ಪಿಚ್ ಸರಿಪಡಿಸಲು ಬಳಕೆ ಮಾಡಬೇಡಿ ಎಂದು ಬಿಸಿಸಿಐಗೆ ಕಿವಿಮಾತು ಹೇಳಿತ್ತು.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top
error: Content is protected !!