ಲಂಡನ್: ಮಸರ್ ತೆರೇಸಾ ಅವರಿಗೆ ಯುನೈಟೆಡ್ ಕಿಂಗ್ಟಮ್ನಲ್ಲಿ ಮರಣೋತ್ತರವಾಗಿ ಸಂಸ್ಥಾಪಕರ ಪ್ರಶಸ್ತಿ 2016 ಪ್ರದಾನ ಮಾಡಲಾಗಿದೆ. ಏಷ್ಯಾ ರಾಷ್ಟ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಜನರ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ತೆರೇಸಾ ಅವರ ಸೋದರ ಸಂಬಂಧಿ, 72 ವರ್ಷದ ಅಜಿ ಬೊಜಾಝ್ಯೂ ಈ ಪ್ರಶಸ್ತಿಯನ್ನು ತೆರೇಸಾ ಅವರ ಪರವಾಗಿ ಸ್ವೀಕರಿಸಲಿದ್ದಾರೆ.
೬ನೇ ಏಷ್ಯನ್ ಅವಾರ್ಡ್ಸ್ ಯುಕೆನಲ್ಲಿ ನಡೆಯಲಿದ್ದು, ವ್ಯಾಪಾರ, ಲೋಕೋಪಕಾರ, ಮನರಂಜನೆ, ಸಂಸ್ಕೃತಿ ಮತ್ತು ಕ್ರೀಡೆ ಮುಂತಾದ 14 ವಿಭಾಗಗಳಲ್ಲಿ ಅನುಕರಣೀಯ ಸಾಧನೆ ಮಾಡಿದ ಜಾಗತಿಕ ಏಷ್ಯಾ ಸಮುದಾಯದ ಜನರಿಗೆ ಸಂಸ್ಥಾಪಕರ ಪ್ರಶಸ್ತಿ ನೀಡಲಾಗುತ್ತಿದೆ.
ಏಷ್ಯನ್ ಅವಾಡ್ಸ್ನ್ನು ಲೆಮನ್ ಕಂಪೆನಿಯ ಸ್ಥಾಪಕ ಹಾಗೂ ಉದ್ಯಮಿ ಪೌಲ್ ಸೀಗೂ ೨೦೧೦ರಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಿದ್ದರು. ಸೆ.4ರಂದು ಮದರ್ ತೆರೇಸಾ ಅವರನ್ನು ಸಂತರಾಗಿ ಘೋಷಿಸಲಾಗುತ್ತಿದ್ದು, ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿರುವುದು ಖುಷಿ ತಂತಿದೆ ಎಂದು ಪೌಲ್ ಹೇಳಿದ್ದಾರೆ.
ಯುಕೆಯಲ್ಲಿ ಮಹಾತ್ಮ ಗಾಂಧಿ ಮೂರ್ತಿ ಸ್ಥಪನೆಗೆ 1,00,00 ಪೌಡ್ ನೀಡಿದ ಎನ್ಆರ್ಐ ಉದ್ಯಮಿ ರಾಮಿ ರೇಂಜರ್ ಸಮುದಾಯ ಸೇವೆ ಪ್ರಶಸ್ತಿ ಪಡೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.