Saturday, April 9th, 2016
Admin
ನವದೆಹಲಿ: ಪಾಕಿಸ್ಥಾನ ಮತ್ತು ಚೀನಾ ದೇಶಗಳು ನಿರಂತರವಾಗಿ ಒಡ್ಡುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಭಾರತ 40 ಯುಎಸ್ ಪ್ರಿಡೇಟರ್ ಸರ್ವಿಲೆನ್ಸ್ ಡ್ರೋನ್ ಗಳ ಖರೀದಿಗೆ ಮುಂದಾಗಿದೆ.
ಮಾನವರಹಿತ ತಂತ್ರಜ್ಞಾನಗಳನ್ನು ಮಿಲಿಟರಿಯಲ್ಲಿ ಹೆಚ್ಚು ಹೆಚ್ಚು ಬಳಕೆ ಮಾಡಿ, ತನ್ನ ಇಂಟೆಲಿಜೆನ್ಸ್ನ್ನು ಇನ್ನಷ್ಟು ಬಲಪಡಿಸಿಕೊಳ್ಳಬೇಕೆಂಬ ಗುರಿ ಹೊಂದಿರುವ ಭಾರತ, 40 ಪ್ರಿಡೇಟರ್ ಡ್ರೋನ್ಗಳ ಖರೀದಿಯ ಬಗ್ಗೆ ಅಮೆರಿಕಾದೊಂದಿಗೆ ಮಾತುಕತೆಯನ್ನು ನಡೆಸುತ್ತಿದೆ.
ಪಾಕಿಸ್ಥಾನ ಮತ್ತು ಚೀನಾ ಗಡಿಯಲ್ಲಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದು, ಇಂಡಿಯನ್ ಓಶಿಯನ್ ಮೇಲೆ ಹತ್ತಿರದ ನಿಗಾ ಇಡುವ ಉದ್ದೇಶವನ್ನು ಭಾರತ ಹೊಂದಿದೆ.
ಕಾಶ್ಮೀರದ ಹಿಮಾಲಯದ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಭಾರತ ಈಗಾಗಲೆ ಇಸ್ರೇಲ್ ಡ್ರೋನ್ಗಳನ್ನು ಖರೀದಿಸಿದೆ.