ಸರ್ಕಾರ ನಡೆಸುತ್ತಿರುವ ಪಬ್ಲಿಕ್ ಡಿಜಿಟಲ್ ಡಿಪ್ಲೊಮೆಸಿ ಪ್ರಯತ್ನಗಳು ಕೊನೆಗೂ ಫಲ ನೀಡಿದೆ, ಡಿಜಿಟಲ್ ರಾಜತಾಂತ್ರಿಕ ಪ್ರದರ್ಶನದಲ್ಲಿ ಟಾಪ್ ಹತ್ತು ದೇಶಗಳ ಪೈಕಿ ಭಾರತವೂ ಸ್ಥಾನವನ್ನು ಪಡೆದುಕೊಂಡಿದೆ. ಗ್ಲೋಬಲ್ ರಿಸರ್ಚ್ ಆಂಡ್ ಅಡ್ವೋಕೆಸಿ ಪ್ಲಾಟ್ಫಾರ್ಮ್ ವರದಿ ಈ ಅಂಶವನ್ನು ಬಹಿರಂಗಪಡಿಸಿದೆ.
ಡಿಪ್ಲೋಮೆಸಿ ಲೈವ್, ಗ್ಲೋಬಲ್ ರಿಸರ್ಚ್, ಅಡ್ವೋಕಸಿ, ಕನ್ಸಲ್ಟಿಂಗ್, ಟ್ರೈನಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಕಳೆದ ಒಂದು ವರ್ಷದಲ್ಲಿ ಭಾರತ ಪ್ರದರ್ಶಿಸುತ್ತಿರುವ ಡಿಜಿಟಲ್ ಡಿಪ್ಲೋಮಸಿಯಿಂದಾಗಿ ಟಾಪ್ ಹತ್ತು ದೇಶಗಳಲ್ಲಿ ಸ್ಥಾನ ಪಡೆದುಕೊಂಡಿದೆ
ಭಾರತ ಮತ್ತು ಮೆಕ್ಸಿಕೋ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಅಭಿವೃದ್ಧಿಶೀಲ ರಾಷ್ಟ್ರಗಳಾಗಿವೆ.
ಭಾರತ ಫೇಸ್ಬುಕ್, ಟ್ವಿಟರ್ನಂತಹ ಮಾಧ್ಯಮಗಳನ್ನು ಸದ್ಭಳಕೆ ಮಾಡಿಕೊಂಡು ವಿದೇಶಗಳ ಜೊತೆ ಸಂಪರ್ಕ ಸಾಧಿಸುತ್ತಿದೆ, ತುರ್ತು ಪರಿಸ್ಥಿತಿಗಳಲ್ಲಿ ಇವುಗಳ ಸದ್ಭಳಕೆಯನ್ನು ಮಾಡಿಕೊಳ್ಳುತ್ತಿದೆ. ಅದೇ ಕಾರಣಕ್ಕೆ ಇಂದು ಟಾಪ್ ಸ್ಥಾನದಲ್ಲಿದೆ.
ವಿದೇಶಾಂಗ ಸಚಿವಾಲಯದ ಫೇಸ್ಬುಕ್ ಪೇಜ್ 1.2 ಮಿಲಿಯನ್ ಫಾಲೋವರ್ಗಳನ್ನು ಹೊಂದಿದ್ದು, ಯುಎಸ್ ಬಳಿಕ ಎರಡನೇ ಸ್ಥಾನದಲ್ಲಿದೆ. ಸಚಿವಾಲಯದ ಕಾಂಪಾನಿಯನ್ ಪೇಜ್, ಪಬ್ಲಿಕ್ ಡಿಪ್ಲೋಮಸಿ ಒಂದೇ 850,೦೦೦ ಫಾಲೋವರ್ಗಳನ್ನು ಹೊಂದಿದೆ. ಟ್ವಿಟರ್ 1.2 ಮಿಲಯನ್ ಫಾಲೋವರ್ಗಳನ್ನು ಹೊಂದಿದೆ. ಸಚಿವಾಲಯದ ಯುಟ್ಯೂಬ್ 40 ಸಾವಿರ ಸಬ್ಸ್ಕ್ರೈಬರ್ಗಳನ್ನು ಹೊಂದಿದೆ ಎಂದು ಎಂದು ವಿದೇಶಾಂಗ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
ಗೂಗಲ್ ಪ್ಲಸ್, ಫ್ಲಿಕರ್, ಇನ್ಸ್ಸ್ಟಾಗ್ರಾಂ, ಸೌಂಡ್ಕ್ಲೌಡ್ ವೇದಿಕೆಯಲ್ಲೂ ಸಚಿವಾಲಯ ಅವೈಲೇಬಲ್ ಆಗಿದೆ, ಸಚಿವಾಲಯದ ಮೊಬೈಲ್ ಆಪ್ 150,000 ಡೌನ್ಲೋಡ್ಗಳನ್ನು ಕಂಡಿದೆ.
ವಿದೇಶದಲ್ಲಿ ಭಾರತ ನಡೆಸುತ್ತಿರುವ ಕಾರ್ಯಾಚರಣೆಗಳ, ಪೋಸ್ಟ್ಗಳ ವಿವರ ಶೇ.95ರಷ್ಟು ಫೇಸ್ಬುಕ್ನಲ್ಲಿ ಮತ್ತು ಶೇ.65ರಷ್ಟು ಟ್ವಿಟರ್ನಲ್ಲಿ ಲಭ್ಯವಾಗಿದೆ.
ಯೆಮೆನ್, ಲಿಬಿಯಾದಲ್ಲಿನ ಭಾರತೀಯರನ್ನು ರಕ್ಷಣೆ, ನೇಪಾಳದಲ್ಲಿ ಸಂಭವಿಸಿದ ಭೂಕಂಪ ಹೀಗೆ ಹಲವಾರು ತರ್ತು ಪರಿಸ್ಥಿತಿಗಳಲ್ಲಿ ಆನ್ಲೈನ್ ಸ್ಪೇಸ್ ಅತ್ಯಂತ ಪ್ರಮುಖ ಪಾತ್ರವನ್ನು ನಿಭಾಯಿಸಿದೆ ಎಂದು ಭಾರತದ ಡಿಜಿಟಲ್ ಡಿಪ್ಲೋಮಸಿಯ ಬಗ್ಗೆ ಸ್ವರೂಪ್ ಹೇಳಿಕೊಂಡಿದ್ದಾರೆ.