Thursday, April 7th, 2016
News13
ನವದೆಹಲಿ: ಕೇಂದ್ರ ಸಂಪುಟ ಹೊಸ ತರಂಗಾಂತರ ನೀತಿ ಜಾರಿಗೊಳಿಸಿದೆ. ಈ ನೀತಿಯಲ್ಲಿ ತರಂಗಾಂತರದ ಹಂಚಿಕೆಯ ಸಂದರ್ಭ ದರಗಳು ನಿಗದಿಯಾಗದಿದ್ದರೆ ಆ ಸಂದರ್ಭದಲ್ಲಿ ಪೂರ್ವ ನಿಗದಿತ ದರದಲ್ಲಿ ಹಂಚಿಕೆ ಮಾಡಲಿದೆ. ಕೇಂದ್ರ ಸಂಪುಟ ಈ ಆಡಳಿತಾತ್ಮಕ ಸ್ಪೆಕ್ಟ್ರಂ ಉದಾರೀಕರಣಕ್ಕೆ ಹಸಿರು ನಿಶಾನೆ ನೀಡಿದೆ.
ಇದು ಟೆಲಿಕಾಂ ಸೇವಾದಾರರು ಹೊಂದಿರುವ ಹೊಸ ತಂತ್ರಜ್ಞಾನ, ಸ್ಪೆಟ್ರಂ ಹಂಚಿಕೆ ಮತ್ತು ಸ್ಪೆಕ್ಟ್ರಂ ಮಾರಾಟದಲ್ಲಿ ಸೂಕ್ತ ಮಟ್ಟದ ಸ್ಪೆಕ್ಟ್ರಂ ಬಳಕೆಗೆ ಸಹಾಯಕವಾಗಲಿದೆ.
ಪರವಾನಗಿ ಹಂಚಿಕೆ ಸ್ಪೆಕ್ಟ್ರಂಗಳ ಸೇವೆಗಳನ್ನು ಪರವಾನಗಿ ಹೊಂದಿದ ಸೇವಾದಾರರು ಮಾತ್ರವೇ ಬಳಸಬಹುದಾಗಿದೆ.
ಒಮ್ಮೆ ಉದಾರೀಕರೀಕಣಗೊಂಡ ಬಳಿಕ ಟೆಲಿಕಾಂ ಕಂಪೆನಿಗಳು ಆಡಳಿತಾತ್ಮಕ ಸ್ಪೆಕ್ಟ್ರಂನ ಯಾವುದೇ ಸೇವೆಗಳನ್ನು ಒದಗಿಸಬಹುದು. ಕರ್ನಾಟಕ, ಕೇರಳ, ತಮಿಳುನಡು, ಮತ್ತು ರಾಜಸ್ಥಾನಗಳಲ್ಲಿ ಟೆಲಿಕಾಂ ಸೇವಾದಾರರು ತಮ್ಮ ೮೦೦ ಎಗಾ ಹರ್ಟ್ಸ್ ತರಂಗಾತರಗಳನ್ನು ಉದಾರೀಕರಿಸಬಹುದು.